Thursday, May 2, 2024
spot_imgspot_img
spot_imgspot_img

ಮೊಸರಿನಲ್ಲಿದೆ ಬಹುಗುಣ

- Advertisement -G L Acharya panikkar
- Advertisement -

ಸ್ವಲ್ಪ ಜೀರಿಗೆಯನ್ನು ಪುಡಿ ಮಾಡಿ ಅದನ್ನು ಒಂದು ಕಪ್‌ ಮೊಸರಿನಲ್ಲಿ ಬೆರೆಸಿಕೊಂಡು ಸೇವಿಸಿದರೆ ಶೀಘ್ರವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.

ಸ್ವಲ್ಪ ಉಪ್ಪನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಅದನ್ನು ಒಂದು ಕಪ್‌ ಮೊಸರಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು. ಇದರಿಂದ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಮುಖ್ಯವಾಗಿ ಗ್ಯಾಸ್‌, ಆ್ಯಸಿಡಿಟಿಯಂತಹ ಸಮಸ್ಯೆ ಕಡಿಮೆಯಾಗುತ್ತವೆ.

ಮೊಸರಿಗೆ ಸಕ್ಕರೆ ಬೆರೆಸಿಕೊಂಡು ಸೇವಿಸಬೇಕು. ಇದರಿಂದ ದೇಹಕ್ಕೆ ತಕ್ಷಣವೇ ಶಕ್ತಿ ಸಿಗುತ್ತದೆ. ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ.

ಒಂದು ಚಮಚ ಓಂಕಾಳನ್ನು ಒಂದು ಕಪ್‌ ಮೊಸರಿನೊಂದಿಗೆ ಬೆರೆಸಿ ಸೇವಿಸಿದರೆ ಬಾಯಿಹುಣ್ಣು, ಹಲ್ಲುನೋವು ಇತರೆ ದಂತ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಒಂದು ಕಪ್ಪು ಮೊಸರಿನೊಂದಿಗೆ ಸ್ವಲ್ಪ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿದರೆ ಮಲಬದ್ಧತೆ ದೂರವಾಗುತ್ತದೆ. ಸೇವಿಸಿದ ಆಹಾರ ಸರಿಯಾಗಿ ಪಚನವಾಗುತ್ತದೆ.

ಮೊಸರಿಗೆ 3 ಚಮಚ ಓಟ್ಸ್‌ ಬೆರೆಸಿ ತಿನ್ನಬೇಕು. ಹೀಗೆ ಮಾಡುವುದರಿಂದ ದೇಹಕ್ಕೆ ಬೇಕಾದ ಉತ್ತಮ ಪೋ›ಟೀನ್‌ ಸಿಗುತ್ತದೆ. ಇವು ಸ್ನಾಯುಗಳ ಶಕ್ತಿಗೆ ಸಹಾಯಕಾರಿಯಾಗಿದೆ.

ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಲವು ವಿಧದ ಸೋಂಕುಗಳು, ರೋಗಗಳು ಬರದಂತೆ ನೋಡಿಕೊಳ್ಳಬಹುದು.

ಮೊಸರಿನೊಂದಿಗೆ ಕಿತ್ತಳೆ ಜ್ಯೂಸ್‌ ಬೆರೆಸಿಕೊಂಡು ಕುಡಿದರೆ ಶರೀರಕ್ಕೆ ಸಾಕಷ್ಟು ವಿಟಮಿನ್‌ ಸಿ ಲಭ್ಯವಾಗುತ್ತದೆ. ಇದು ಕೀಲು ನೋವು ಕಡಿಮೆ ಮಾಡುತ್ತದೆ. ವೃದ್ಧಾಪ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಅಲ್ಸರ್‌ ಮಾಯವಾಗುತ್ತದೆ. ಈ ಮಿಶ್ರಣ ಆ್ಯಂಟಿಬಯೋಟಿಕ್‌ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿನ ಸೋಂಕು ಕೂಡಲೇ ಕಡಿಮೆಯಾಗುತ್ತದೆ.

- Advertisement -

Related news

error: Content is protected !!