Friday, May 3, 2024
spot_imgspot_img
spot_imgspot_img

ಸೈಬರ್ ಕ್ರೈಮ್ ನಿಂದ 2019ರಲ್ಲಿ ದೇಶಕ್ಕೆ 1.25 ಲಕ್ಷ ಕೋಟಿ ನಷ್ಟ

- Advertisement -G L Acharya panikkar
- Advertisement -

ನವದೆಹಲಿ: ಸೈಬರ್ ಕ್ರೈಮ್’ನಿಂದ 2019ರಲ್ಲಿ ದೇಶಕ್ಕೆ 1.25 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಕೋ ಆರ್ಡನೇಟರ್ ಲೆ. ಜನರಲ್ ರಾಜೇಶ್ ಪಂತ್ ಮಂಗಳವಾರ ಹೇಳಿದ್ದಾರೆ.
ಕಳೆದ ವರ್ಷ ನಮ್ಮ ಅಧಿಕೃತ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸೈಬರ್ ಕ್ರೈಮ್ ನಿಂದ 1.25 ಲಕ್ಷ ಕೋಟಿ ನಷ್ಟವಾಗಿದೆ. ರಾನ್ಸಮ್ ವೇರ್ ಪ್ರತಿ ದಿನ ಹೆಚ್ಚಾಗುತ್ತಿದೆ. ಈ ಕ್ರಿಮಿನಲ್ ಗಳು ಮನೆಗಳಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರು ಹೃದಯಹೀನ ಜನರು. ಅವರು ಆಸ್ಪತ್ರೆಗಳ ಮೇಲೆ ದಾಳಿ ಮಾಡುತ್ತಾರೆ. ಏಕೆಂದರೆ ತುರ್ತು ಅಂದರೆ ಆಸ್ಪತ್ರೆಯಿಂದ ಹಣ ಪಾವತಿಯಾಗುತ್ತದೆ ಎಂಬುದು ಅವರಿಗೆ ಗೊತ್ತಿದೆ ಎಂದು ಎಫ್ ಐಸಿಸಿಐ ಕಾರ್ಯಕ್ರಮದಲ್ಲಿ ಪಂತ್ ಹೇಳಿದ್ದಾರೆ. ಮೊಬೈಲ್ ಮೂಲಕ ವಿವಿಧ ಸೇವೆಗಳನ್ನು ಪಡೆಯುವ ದುರ್ಬಲರೇ ಅವರ ಗುರಿ. ಮೊಬೈಲ್ ಅಪ್ಲಿಕೇಷನ್ ಗಳಿಂದ ಮಾತ್ರ ಅಲ್ಲ ಪ್ರೊಸೆಸರ್, ಮೆಮೊರಿ ಚಿಪ್, ಬ್ಲೂಟೂಥ್ ಹಾಗೂ ವೈಫೈ ಮೂಲಕವೂ ದಾಳಿ ನಡೆಸುತ್ತಿರುವುದು ಹೀಗೆ ಹದಿನೈದು ವಿವಿಧ ಬಗೆಯ ದಾಳಿಯು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಈ ರೀತಿಯ ಸೈಬರ್ ದಾಳಿಗಳನ್ನು ತಡೆಯುವ ಉದ್ದೇಶದಿಂದಲೇ ರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!