Friday, April 19, 2024
spot_imgspot_img
spot_imgspot_img

ದಕ್ಷಿಣ ಕನ್ನಡ: ಇಂದು ಸಾರಿಗೆ ನೌಕರರ ಮುಷ್ಕರ; ಮುಂಜಾನೆಯಿಂದಲೇ ಯಾವುದೇ ಕೆ ಎಸ್ ಆರ್ ಟಿ ಸಿ ಬಸ್ಸುಗಳು ರಸ್ತೆಗೆ ಇಳಿದಿಲ್ಲ!

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ: ಇಂದು ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಷ್ಕರಕ್ಕೆ ಬೆಂಬಲವಿದ್ದು, ಮಂಗಳೂರಿನಲ್ಲಿ ರಸ್ತೆಗಿಳಿಯದ ಸರ್ಕಾರಿ ಬಸ್ ಗಳು. ಬಸ್ ಗಳು ಇಲ್ಲದೆ ಖಾಲಿ ಖಾಲಿಯಾಗಿರುವ ಬಸ್ ನಿಲ್ದಾಣ. ಕರ್ತವ್ಯಕ್ಕೆ ಗೈರು ಹಾಜರಾಗಿರುವ ಚಾಲಕ ನಿರ್ವಾಹಕರು.

ಬಸ್ ಗಾಗಿ ಬಸ್ ಸ್ಟ್ಯಾಂಡ್ ನಲ್ಲಿ‌ ಕಾದು ಕುಳಿತಿರುವ ಪ್ರಯಾಣಿಕರು. ಸಂಪೂರ್ಣವಾಗಿ ಸ್ಥಗಿತವಾಗಿರುವ ಸರ್ಕಾರಿ ಬಸ್ ಸೇವೆ. ಖಾಸಗಿ ಬಸ್ ಗಳ ಮೊರೆ ಹೋದ ಪ್ರಯಾಣಿಕರು. ಮುಂಜಾಗ್ರತಾ ಕ್ರಮವಾಗಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್.

ಮುಂಜಾನೆಯಿಂದಲೇ ಯಾವುದೇ ಕೆಎಸ್ ಆರ್ ಟಿಸಿ ಬಸ್ಸುಗಳು ರಸ್ತೆಗೆ ಇಳಿಯದೆ ಮುಷ್ಕರದಲ್ಲಿ ಭಾಗಿಯಾಗಿದೆ. ಜಿಲ್ಲೆಯಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಹೋಗುವ ಎಲ್ಲಾ ಬಸ್ಸುಗಳು ಸ್ಥಗಿತಗೊಂಡಿದ್ದು ಬಸ್ ನಿಲ್ದಾಣ ಬಿಕೋ ಅನ್ನುತ್ತಿದೆ..

ಕೇರಳಕ್ಕೆ ಹೋಗುವ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಮಾತ್ರ ಸಂಚಾರ ನಡೆಸುತ್ತಿದ್ದು ಕೆಲವು ಖಾಸಗಿ ಬಸ್ಸುಗಳು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಿಂದ ಮೈಸೂರು, ಬೆಂಗಳೂರಿಗೆ ಹೊರಟಿದೆ.

ಮಂಗಳೂರು KSRTC ಬಸ್ ನಿಲ್ದಾಣದೊಳಗೆ ಬಂದ ಖಾಸಗಿ ಬಸ್ ಗಳು ಮೈಸೂರು, ಸೇರಿದಂತೆ ವಿವಿಧ ಭಾಗಗಳಲ್ಲಿ ತೆರಳಲು ಖಾಸಗಿ ಬಸ್ ಗಳ ವ್ಯವಸ್ಥೆ. KSRTC ಕಡೆಯಿಂದ ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ, ಸಾರಿಗೆ ನೌಕರರು ಕರ್ತವ್ಯಕ್ಕೆ ಆಗಮಿಸದಿದ್ದರೆ ಮತ್ತಷ್ಟು ಖಾಸಗಿ ಬಸ್ ಬಳಸಲು ಸಿದ್ಧತೆ.


- Advertisement -

Related news

error: Content is protected !!