Tuesday, April 23, 2024
spot_imgspot_img
spot_imgspot_img

ದರ್ಬೆಯ ಮನೆಯಲ್ಲಿ ಮಕ್ಕಳ ವಿಶಿಷ್ಟ ಸ್ವಾತಂತ್ರ್ಯ

- Advertisement -G L Acharya panikkar
- Advertisement -

ಪ್ರತಿವರ್ಷವೂ ಸಂಭ್ರಮದ ಸ್ವಾತಂತ್ರ್ಯೋತ್ಸವ, ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಕಲರವ ಇದ್ದರೆ ಈ ವರ್ಷ ಕೊರೋನಾದಿಂದಾಗಿ ಮಕ್ಕಳು ಮನೆಯಲ್ಲೇ ಇರುವ ಪರಿಸ್ಥಿತಿ. ಇದರ ನಡುವೆಯೂ ವಿಟ್ಲ ಸಮೀಪದ ಉಕ್ಕುಡ ದರ್ಬೆ ಸಿರಾಜ್ ಮಂಝಿಲ್ ನ ವಠಾರದ ಮಕ್ಕಳು ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ಆಚರಿಸಿದ್ದು ಸಾಮಾಜಿಕ ತಾಣದಲ್ಲಿ ಮೆಚ್ಚುಗೆ ಪಡೆದಿದೆ. ಉಕ್ಕುಡ ದರ್ಬೆಯ ಡಿ.ಎಂ. ರಶೀದ್ ಅವರ ಮನೆಯ ಅಂಗಳದಲ್ಲಿ ಹುಡುಗಿಯೊಬ್ಬಳು ಧ್ವಜ ಹಿಡಿದು ಧ್ವಜಸ್ಥಂಬವಾದಳು. ಪುಟ್ಟ ಪುಟ್ಟ ಮಕ್ಕಳು ಧ್ವಜವಂದನೆ ಮಾಡಿ ರಾಷ್ಟ್ರಗೀತೆ ಹಾಡಿದರು.

https://www.facebook.com/vtv.vitla.5/videos/199428374939998

ಹತ್ತಿರದ ವ್ಯಾಪಾರಿ ನವಾಝ್ ಮುಖ್ಯ ಅತಿಥಿಯಾದರು. ಸಹೋದರರಾದ ಡಿ.ಎಂ.ರಶೀದ್, ಮುನೀರ್ ಹಾಗೂ ಮನ್ಸೂರ್ ಅವರ ಮಕ್ಕಳು ಝಂಡಾ ಊಂಚಾ ಹಾಡಿ ಧ್ವಜವಂದನೆ ನಡೆಸಿ ಜನಗಣಮನ ಪ್ರಾರ್ಥನೆ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆ ಪಡೆದಿದೆ. ಕೊರೋನಾ ಸಂದರ್ಭದಲ್ಲೂ ಮಕ್ಕಳ ದೇಶಪ್ರೇಮದ ಈ ಪರಿಕಲ್ಪನೆ ಉತ್ತಮವಾಗಿತ್ತು.

- Advertisement -

Related news

error: Content is protected !!