Wednesday, July 22, 2026
spot_imgspot_img
spot_imgspot_img

ದಾವಣಗೆರೆ: ಜಮೀನು ಒತ್ತುವರಿ ವಿಚಾರಕ್ಕೆ ಸಹೋದರರಿಗೆ ಗಲಾಟೆ: ತಮ್ಮನ ಕೊಲೆ

- Advertisement -
- Advertisement -

ದಾವಣಗೆರೆ: ತಾಲೂಕಿನ ಜಮೀನು ಒತ್ತುವರಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಮ್ಮನ ತಲೆ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಘಟನೆ ತಾಲೂಕಿನ ಮಾಯಕೊಂಡದಲ್ಲಿ ನಡೆದಿದೆ.

ಕೊಲೆಯಾದವನನ್ನು ಸಿ.ಕೆ ನೀಲಪ್ಪ (62) ಎಂದು ಗುರುತಿಸಲಾಗಿದೆ. ಹತ್ಯೆಗೈದವನನ್ನು ಸಿ.ಕೆ ಚಂದ್ರಪ್ಪ ಎಂದು ಗುರುತಿಸಲಾಗಿದೆ. ಜಮೀನು ಒತ್ತುವರಿ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ, ಮಾತಿಗೆ ಮಾತು ಬೆಳೆದು ಘರ್ಷಣೆ ನಡೆದು, ಚಂದ್ರಪ್ಪ ತಮ್ಮನ ತಲೆ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ನೀಲಪ್ಪ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಾಯಕೊಂಡ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೊಲೆಯಾದ ನೀಲಪ್ಪ ಕುಟುಂಬಸ್ಥರು, ಕೊಲೆಗೆ ಚಂದ್ರಪ್ಪನ ಕುಟುಂಬದ ಸದಸ್ಯರು ಸಹಕರಿಸಿದ್ದಾರೆ. ಅವರೆಲ್ಲರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.

- Advertisement -

Related news

error: Content is protected !!