ಇವರ ವೃತ್ತಿಕಾರ್ಯ ಪ್ರತಿಯೊಬ್ಬ ಪೊಲೀಸರಿಗೆ ಮಾದರಿ
ಯಾವುದೇ ಪ್ರಚಾರ ಬಯಸದೇ ಪ್ರಮಾಣಿಕವಾಗಿ ಸೇವೆ
ಅನ್ಯಾಯದ ವಿರುದ್ಧ ಹೋರಾಡುವ ಖಡಕ್ ಅಧಿಕಾರಿ
ಮಂಗಳೂರು: ಡಿಸಿಪಿ ಶ್ರೀ ಲಕ್ಷ್ಮೀ ಗಣೇಶ್…ದಕ್ಷ ಪೊಲೀಸ್ ಅಧಿಕಾರಿ. ಪೊಲೀಸ್ ಇಲಾಖೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ರೂಡಿಸಿಕೊಂಡು ಬಂದಿದ್ದಾರೆ. ಇವರು ಒಬ್ಬ ಸಮರ್ಥ ಪೊಲೀಸ್ ಅಧಿಕಾರಿ ಎಂದರೆ ತಪ್ಪಲಾಗಲಾರದು. ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ವೃತ್ತಿಕಾರ್ಯ ಪ್ರತಿಯೊಬ್ಬ ಪೊಲೀಸರಿಗೆ ಹಿಡಿದ ಕೈಗನ್ನಡಿಯಂತಿದೆ.
ರಾಜ್ಯದ ವಿವಿಧ ಕಡೆಗಳಲ್ಲಿ ಎಸ್ಪಿಯಾಗಿ, ಡಿಸಿಪಿಯಾಗಿ ಅತ್ಯಂತ ಪ್ರಾಮಾಣಿಕತೆ, ದಕ್ಷತೆಯಿಂದ ಸೇವೆ ಸಲ್ಲಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಂದಹಾಗೆ ಸದ್ಯ, ಇವರು ಮಂಗಳೂರು ನಗರದ ಕ್ರೈಂ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೆಲಸದ ಮೂಲಕವೇ ಎಲ್ಲ ಪ್ರಶ್ನೆಗಳಿಗೆ ಉತ್ತರ
ತನ್ನ ಇಷ್ಟು ವರ್ಷಗಳ ಸೇವೆಯಲ್ಲಿ ಯಾರ ಪ್ರಭಾವಕ್ಕೂ ಜಗ್ಗಿಲ್ಲ, ಯಾವುದೇ ಆಮಿಷಕ್ಕೂ ಬಗಿಲ್ಲ. ಹೀಗಾಗಿ ಇವರು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಯಾವುದೇ ಪ್ರಚಾರ ಬಯಸದೇ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲ ಪ್ರಶ್ನೆಗಳಿಗೆ ಮಾತಿನ ಮೂಲಕ ಉತ್ತರ ಕೊಡುವ ಬದಲಾಗಿ ಕೆಲಸ ಮಾಡಿ ತೋರಿಸುವ ಒಬ್ಬ ಖಡಕ್ ಪೊಲೀಸ್ ಅಧಿಕಾರಿ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇಡೀ ರಾಮನಗರವನ್ನು ಬೆಚ್ಚಿ ಬೀಳಿಸಿದ ,ಅಂದಿನ ತ್ರಿವಳಿ ಕೊಲೆ, ಅತ್ಯಾಚಾರ ಪ್ರಕರಣವನ್ನು 24 ಗಂಟೆಯೊಳಗೆ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದು.ಇದೇ ಲಕ್ಷ್ಮಿ ಗಣೇಶ್ ನೇತೃತ್ವದ ಪೊಲೀಸ್ ರ ತಂಡ.. ರಾಮನಗರ ಉಪವಿಭಾಗದ ಡಿವೈಎಸ್ಪಿ ಯಾಗಿದ್ದಾಗ ಅವರು ಐಜಿಪಿ ಅವರ ಆದೇಶ ದಂತೆ ಪ್ರಕರಣದ ಜವಾಬ್ದಾರಿಯನ್ನು ತೆಗೆದುಕೊಂಡು ಡಿವೈಎಸ್ಪಿ ಲಕ್ಷ್ಮಿ ಗಣೇಶ್ ಖುದ್ದು ಫೀಲ್ಡ್ ಗೆ ಇಳಿದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು, ನ್ಯಾಯಾಲಯ ಕೂಡ ಆರೋಪಿಗೆ ಮರಣದಂಡನೆ ಶಿಕ್ಷೆ ಹಾಗೂ ದಂಡ ವಿದಿಸಿತ್ತು.
ಹಾಗೆ ರಾಜ್ಯವನ್ನು ಬೆಚ್ಚಿ ಬೀಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರಿನಲ್ಲಿ ನಡೆದ ಕೋಮುಗಲಭೆಯನ್ನು ಸಮರ್ಥವಾಗಿ ನಿಭಾಯಿಸಿರುವುದು. ದ.ಕ ಜಿಲ್ಲೆಗೆ ಬಂದ ನಂತರ ಹಲವಾರು ಸಮಸ್ಯೆಗಳನ್ನು ನಿವಾರಿಸಿದ್ದಾರೆ. ಅಲ್ಲದೇ, ಸಮಾಜದ ಧ್ವನಿಗೆ ತಕ್ಷಣ ಸ್ಪಂದಿಸುತ್ತಾರೆ. ಒಟ್ಟಿನಲ್ಲಿ ಒಬ್ಬ ಪ್ರಾಮಾಣಿಕ, ಸಮರ್ಥ, ದಕ್ಷ ಪೊಲೀಸ್ ಅಧಿಕಾರಿ ಶ್ರೀ ಲಕ್ಷ್ಮೀ ಗಣೇಶ್ ಅವರ ಕಾರ್ಯವೈಖರಿಗೆ ಹ್ಯಾಟ್ಸಪ್ ಹೇಳಲೇಬೇಕು.