- Advertisement -
- Advertisement -



ಕಾಸರಗೋಡು: ರೈಲು ಹಳಿಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹೊಸದುರ್ಗ ಸಮೀಪ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಸಂತು ಮಾಲಿಕ್ (32) ಮತ್ತು ಫಾರೂಕ್ ಶೇಖ್(23) ಮೃತ ಪಟ್ಟವರು.
ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ ಇವರು ಹೊಸದುರ್ಗ ಕೊಳ ವಯಲಿನ ಕ್ವಾ ಟರ್ಸ್ ನಲ್ಲಿ ವಾಸವಾಗಿದ್ದರು. ಮೃತ ದೇಹಗಳ ಬಳಿ ಎ ಟಿ ಎಂ ಕಾರ್ಡ್ ಹಾಗೂ ಮೊಬೈಲ್ ಫೋನ್ ಹುಡಿ ಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹೊಸದುರ್ಗ ಗೇಟ್ ಸಮೀಪ ದ ಹಳಿಯಲ್ಲಿ ಶನಿವಾರ ಬೆಳಿಗ್ಗೆ ಮೃತ ದೇಹಗಳು ಪತ್ತೆಯಾಗಿವೆ.ರೈಲು ಹಳಿ ಮೂಲಕ ನಡೆದು ಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರೈಲು ಬಡಿದು ಈ ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಹೊಸದುರ್ಗ ಠಾಣಾ ಪೊಲೀಸರು ಮಹಜರು ನಡೆಸಿದರು. ಮೃತ ದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
- Advertisement -