Friday, September 11, 2026
spot_imgspot_img
spot_imgspot_img

ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಬೆಳಗಾವಿ: ಮೂವರು ಮಕ್ಕಳೊಂದಿಗೆ ತಾಯಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಬಳಿ ನಡೆದಿದೆ.ತಾಯಿ ಶಾರದಾ (32), ಮಕ್ಕಳಾದ ಅಮೃತಾ, ಆದರ್ಶ ಹಾಗೂ ಅನುಷ್ಕಾ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮಕ್ಕಳೊಂದಿಗೆ ತಾಯಿ ಕೃಷ್ಣಾ ನದಿಗೆ ಹಾರುವುದನ್ನು ಕಂಡು ಸ್ಥಳೀಯರು ನೀರಿನಲ್ಲಿ ಮುಳುಗುತ್ತಿದ್ದ ಅನುಷ್ಕಾಳನ್ನು ರಕ್ಷಿಸಿದರು. ತಕ್ಷಣವೇ ಆಕೆಯನ್ನು ರಾಯಬಾಗ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆಕೆ ಮೃತಪಟ್ಟಿದ್ದಾಳೆ.ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪತಿ ಅಶೋಕ್ ಕಿರುಕುಳದಿಂದ ಬೇಸತ್ತು ಶಾರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!