- Advertisement -
- Advertisement -



ಛತ್ತೀಸ್‌ಗಢ: ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರ ಮಗಳು ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಶುಕ್ರವಾರ (ಮಾ.14)ನಡೆದಿದೆ.
ಬಿಜೆಪಿಯ ಭಿಲಾಯಿ ಮಹಿಳಾ ಮೋರ್ಚಾ ಅಧ್ತ್ಯಕ್ಷೆಯಾಗಿರುವ ಸ್ವೀಟಿ ಕೌಶಿಕ್ ಅವರ ಪುತ್ರಿ ರಿಚಾ(23) ಮೃತ ದುರ್ದೈವಿ.ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ರಿಚಾ ತನ್ನ ಗೆಳೆಯರ ಜೊತೆ ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಹೋಟೆಲ್ ಗೆ ಊಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ದುರ್ಗ್-ರಾಜನಂದಗಾಂವ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ರಿಚಾ ಅವರ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ರಾಯ್‌ಪುರದ ರಾಮಕೃಷ್ಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ, ಇನ್ನು ಆಕೆಯ ಜೊತೆಗಿದ್ದ ಮೂವರು ಗೆಳೆಯರಿಗೂ ಗಂಭೀರ ಗಾಯಗಳಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
- Advertisement -








