- Advertisement -
- Advertisement -



ಬೆಳಗಾವಿ : ನಿಪ್ಪಾಣಿ ತಾಲ್ಲೂಕಿನ ಬಾರವಾಡ ಗ್ರಾಮದ ಬಾರವಾಡ- ಕಾರದಗಾ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ರಂಗಪಂಚಮಿಯಂದು ಬಣ್ಣ ಆಡುವಾಗ ಬಾಲಕ ಪ್ರಜ್ವಲದ ಬಾಳಾಸಾಹೇಬ ಪಾಟೀಲ (9) ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಮಾಂಗೂರದಿಂದ ಕಾರದಗಾ ಗ್ರಾಮಕ್ಕೆ ಎರಡು ಟ್ರಾಲಿ ಹೊಂದಿದ್ದ ಟ್ರ್ಯಾಕ್ಟರ್ ತೆರಳುತ್ತಿರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಟ್ರಾಲಿಯ ಹಿಂದಿನ ಚಕ್ರಕ್ಕೆ ಬಾಲಕನ ತಲೆ ಸಿಲುಕಿತ್ತು. ಚಿಕ್ಕೋಡಿಯ ಸಿಪಿಐ ವಿಶ್ವನಾಥ ಚೌಗುಲೆ ಮತ್ತು ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








