- Advertisement -
- Advertisement -


ಮಾಣಿ: ಹಿರಿಯ ಬಿಜೆಪಿ ಕಾರ್ಯಕರ್ತ ಕೊಂಬಿಲ ಉಗ್ಗಪ್ಪ ಶೆಟ್ಟಿಯವರು ನಿನ್ನೆ ಸಂಜೆ ನಿಧನರಾಗಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಸ್ವಗೃಹವಾದ ಕೊಂಬಿಲದಲ್ಲಿ ಇಂದು ಮಧ್ಯಾಹ್ನ 1.00 ಗಂಟೆಗೆ ನಡೆಯಲಿದೆ. ಮೃತರು ಹಲವಾರು ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಬಂಟರಸಂಗಮ ಮಾಣಿ ವಲಯದ ಸದಸ್ಯರಾಗಿದ್ದರು. ಹಾಗೆ ವಿಟ್ಲ ಲಯನ್ಸ್ ಕ್ಲಬ್ ನ ಕಾರ್ಯದರ್ಶಿಯಾಗಿ ಹಾಗೂ ಕೋಶಾಧಿಕಾರಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಎಂ.ಉಗ್ಗಪ್ಪ ಶೆಟ್ಟಿಯವರು ನೇರ ನಡೆ ನುಡಿಯ ಹೃದಯವಂತ ವ್ಯಕ್ತಿ ಯಾಗಿದ್ದು , SCDCC BANK ನಲ್ಲಿ ಶಾಖಾಧಿಕಾರಿಯಾಗಿ, ಬಳಿಕ ಭಡ್ತಿ ಹೊಂದಿ ಉನ್ನತ ಹುದ್ದೆಗಳನ್ನು ಹೊಂದಿದ್ದರು.ಸೇವಾ ನಿವೃತ್ತಿ ಬಳಿಕ ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಪದ್ಮಾವತಿ ಹಾಗೂ ಮಕ್ಕಳು ರಾಮಪ್ರಸಾದ್ ಮತ್ತು ಅಕ್ಷತಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
- Advertisement -