- Advertisement -
- Advertisement -





ದಾಂಡೇಲಿ: ನಗರದ ಕಟ್ಟಿಗೆ ಡಿಪೋ ಪ್ರದೇಶದಲ್ಲಿ ಅಪರಿಚಿತ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಈತ ಇಲ್ಲೇ ಅರಣ್ಯ ಪ್ರದೇಶದಲ್ಲಿಯೇ ವಾಸಿಸುತ್ತಿದ್ದಿರಬಹುದು ಎನ್ನುವುದಕ್ಕೆ ಅಲ್ಲೇ ಹತ್ತಿರದಲ್ಲಿ ಚಾದರ ಹಾಗೂ ಇನ್ನಿತರ ವಸ್ತುಗಳು ದೊರೆತಿವೆ. ಇನ್ನೂ ಮೃತದೇಹವು ಚಾದರ ಹೊದ್ದುಕೊಂಡು ಮಲಗಿದ ಸ್ಥಿತಿಯಲ್ಲಿದ್ದು, ಮೃತದೇಹದ ಮೇಲೆ ಒಣಗಿದ ಮರದ ಟೊಂಗೆಯೊಂದು ಬಿದ್ದಿದೆ ಎಂದು ತಿಳಿದು ಬಂದಿದೆ.ಮಲಗಿದಾತನ ಮೇಲೆ ಒಣಗಿದ ಮರದ ಟೊಂಗೆ ಬಿದ್ದು ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಕಳೆದ ಏಳೆಂಟು ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -