Friday, September 11, 2026
spot_imgspot_img
spot_imgspot_img

ಡಿವೈಡರ್‌ಗೆ ಬೈಕ್‌ ಢಿಕ್ಕಿ ಹೊಡೆದು ಸ್ಥಳದಲ್ಲೇ ಯುವಕ ಮೃತ್ಯು

- Advertisement -
- Advertisement -

ಬೆಳ್ತಂಗಡಿ : ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ-ವೇಣೂರು ರಸ್ತೆಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸಮೀಪದ ಉಕ್ಕಿನಡ್ಕ ನಿವಾಸಿ ಪ್ರಶಾಂತ್ ಪೂಜಾರಿ ಮೃತ ಪಟ್ಟ ಯುವಕ ಎನ್ನಲಾಗಿದೆ.ಪ್ರಶಾಂತ್‌ ಪೂಜಾರಿ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬೈಕ್‌ ಚಲಾಯಿಸಿಕೊಂಡು ಹೋಗಿದ್ದು, ವೇಣೂರು ರಸ್ತೆಯ ದ್ವಾರದಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆ ವಿದ್ಯುತ್ ಕಂಬಕ್ಕೆ ಬಡಿದು ತೀವ್ರ ಸ್ವರೂಪದ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

- Advertisement -

Related news

error: Content is protected !!