Tuesday, March 21, 2023
spot_imgspot_img
spot_imgspot_img

*ಮೀನು ಹಿಡಿಯಲು ಹೋದ ಯುವಕನ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ.*

- Advertisement -G L Acharya G L Acharya
- Advertisement -

ಕಡಬ:-ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆಗಿದ್ದು,ಮೃತದೇಹ ಇದೀಗ ನದಿಯಲ್ಲಿ ಪತ್ತೆಯಾಗಿದೆ.

ಕಡಬ ತಾಲೂಕಿನ ಎಡಮಂಗಲದ ದೊಳ್ತಿಲ ಎಂಬಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ತಡರಾತ್ರಿ ನಡೆದಿತ್ತು.ನಾಪತ್ತೆಯಾದ ಯುವಕನನ್ನು ದೊಳ್ತಿಲ ರಾಮಣ್ಣ ನಾಯ್ಕ್ ಅವರ ಪುತ್ರ ಪ್ರಕಾಶ್ 26(ವ) ಎಂದು ಗುರುತಿಸಲಾಗಿದ್ದು, ಪ್ರಕಾಶ್ ಹಾಗೂ ತನ್ನ ಸ್ನೇಹಿತರಿಬ್ಬರ ಜೊತೆ ಮೀನು ಹಿಡಿಯಲು ಬಿಟ್ಟಿದ್ದ ಬಲೆಯನ್ನು ಈಜಿ ತರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸದ್ಯ ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕ ದಳದ ಅಧಿಕಾರಿಗಳು,ಬೆಳ್ಳಾರೆ ಪೋಲೀಸರು ಭೇಟಿ ನೀಡಿದ್ದು ಶೋಧ ಕಾರ್ಯ ನಡೆಸಿದ್ದು, ಇದೀಗ ಯುವಕ ನಾಪತ್ತೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.

- Advertisement -

Related news

error: Content is protected !!