ವಿಟ್ಲ: ವಿಟ್ಲ ಶಾಂತಿನಗರ ನಿವಾಸಿ ಬಿಜೆಪಿ ಹಿರಿಯ ಮುಖಂಡ ದಿ.ಪಿ. ಮೋಹನ ಶೆಟ್ಟಿ ಯವರ ಧರ್ಮ ಪತ್ನಿ ಪದ್ಮಾವತಿ ಎಂ ಶೆಟ್ಟಿ ( 60 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ರಾಷ್ಟ್ರ ಸೇವಿಕಾ ಸಮಿತಿಯ ಸಕ್ರಿಯ ಸ್ವಯಂಸೇವಕಿ ಆಗಿ ಕೆಲಸ ಮಾಡಿರುವ ಇವರು ವಿಟ್ಲದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ಘಟಕ ಮಾತೃ ಮಂಡಳಿಯನ್ನು ಆರಂಭಿಸಿ ಅದರ ಮೂಲಕ ಸಾಮಾಜಿಕ ಕಾರ್ಯ ಹಾಗೂ ವರಲಕ್ಷ್ಮೀ ಪೂಜೆಯನ್ನು ಪ್ರಾರಂಭಿಸಿದರು. ವಿಟ್ಲ ಫಿರ್ಕಾ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಮಹಿಳಾ ಮಂಡಲ ಹಾಗೂ ಬಿಜೆಪಿ ಯ ಕಾರ್ಯಕರ್ತೆಯಾಗಿ ದುಡಿದಿದ್ದಾರೆ. ಇವರು ಒಂದು ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಬಿಜೆಪಿ ಜಿಲ್ಲಾ ಮುಖಂಡ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ವಿಟ್ಲ ವ್ಯವಸಾಯ ಬ್ಯಾಂಕ್ ಅಧ್ಯಕ್ಷ ನರ್ಸಪ್ಪ ಪೂಜಾರಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಮುಖಂಡ ಗೋವರ್ಧನ್, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ, ಉಪಾಧ್ಯಕ್ಷ ಜಯಂತ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಮುಖ್ಯಾಧಿಕಾರಿ ಮಾಲಿನಿ, ಪಟ್ಟಣ ಪಂಚಾಯತ್ ಸದಸ್ಯರು ಮೃತರ ಮನೆಗೆ ಭೇಟಿ ನೀಡಿದರು.