Friday, June 27, 2025
spot_imgspot_img
spot_imgspot_img

ಉಪ್ಪಿನಂಗಡಿ: ಬೀದಿ ನಾಯಿ ದಾಳಿಗೆ ಜಿಂಕೆ ಮೃತ್ಯು

- Advertisement -
- Advertisement -

ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ವ್ಯಾಪ್ತಿಯ ಸರಳೀಕಟ್ಟೆ ಹೊಸಮುಗೇರು ಎಂಬಲ್ಲಿ ಬೀದಿ ನಾಯಿಯ ದಾಳಿಗೆ ಸಿಲುಕಿ ಸುಮಾರು 6ರಿಂದ 8 ವರ್ಷ ಪ್ರಾಯದ ಗಂಡು ಜಿಂಕೆಯೊಂದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಜಿಂಕೆಯೊಂದು ಶನಿವಾರ ನಸುಕಿನ ವೇಳೆ ಬಾರ್ಯ ಅರಣ್ಯದಿಂದ ಮೇಯುತ್ತ ಕಾಡಿನ ಅಂಚಿಗೆ ಬಂದಿದ್ದು, ಬೀದಿ ನಾಯಿಯೊಂದು ಜಿಂಕೆಯ ಮೇಲೆ ದಾಳಿ ನಡೆಸಿದೆ. ನಾಯಿಯ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡ ಜಿಂಕೆಯನ್ನು ಕಂಡ ಸ್ಥಳೀಯರು, ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸುವಂತೆ ವಿನಂತಿಸಿದ್ದರು.

ಅರಣ್ಯ ಇಲಾಖಾಧಿಕಾರಿಗಳು ಗಾಯಗೊಂಡ ಜಿಂಕೆಯನ್ನು ಸಮೀಪದ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ಯುವಷ್ಟರಲ್ಲಿ ಜಿಂಕೆ ಸಾವನ್ನಪ್ಪಿತ್ತು. ಅರಣ್ಯಾಧಿಕಾರಿ ಮತ್ತು ತಂಡದವರು ಜಿಂಕೆಯ ಮೃತ ದೇಹವನ್ನು ಅರಣ್ಯ ಇಲಾಖೆಯ ಡಿಪೋ ಇರುವ ಮಣ್ಣಗುಂಡಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದರು.

- Advertisement -

Related news

error: Content is protected !!