Monday, June 30, 2025
spot_imgspot_img
spot_imgspot_img

ಕೋವಿಡ್ ನಿಂದ ಅನಾಥರಾದ ಮಕ್ಕಳ ಜವಾಬ್ದಾರಿ ನಮ್ಮದು; ಅರವಿಂದ್ ಕೇಜ್ರಿವಾಲ್

- Advertisement -
- Advertisement -

ದೆಹಲಿ: ಕೊರೊನಾದಿಂದ ಅನಾಥರಾದ ಮಕ್ಕಳ ಶಿಕ್ಷಣ, ಪಾಲನೆಯ ಜವಾಬ್ದಾರಿಯನ್ನು ದೆಹಲಿ ಸರ್ಕಾರ ಹೊತ್ತಿದ್ದು, ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ‘ಉಚಿತ ಶಿಕ್ಷಣ, ತಿಂಗಳಿಗೆ 5 ಸಾವಿರ’ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಕೊರೊನಾ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ‘ಉಚಿತ ಶಿಕ್ಷಣ ಹಾಗೂ ಅವರ ಪಾಲನೆ ಹಾಗೂ ಇತರೆ ವೆಚ್ಚಗಳನ್ನು ಭರಿಸುವುದಾಗಿ ಘೋಷಿಸಿದ್ದು, ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ನಮ್ಮ ಸರ್ಕಾರ ಆರ್ಥಿಕ ಸಹಾಯ ನೀಡಲಿದೆ ಎಂದರು.

ಕೊರೊನಾ ಸೋಂಕಿಗೆ ತುತ್ತಾಗಿ ಹಲವರು ಪ್ರಾಣ ಕಳೆದುಕೊಂಡಿದ್ದು, ಅವರ ಮಕ್ಕಳ ಪಾಲನೆ ಮಾಡುವ ಜವಾಬ್ದಾರಿ ನಮ್ಮದು, ನಾನು ನಿಮ್ಮೊಂದಿಗೆ ಇರುತ್ತೇನೆ, ಸಂತ್ರಸ್ತರ ಕಣ್ಣೊರೆಸುವ ಪ್ರಯತ್ನ ಮಾಡುತ್ತೇನೆ ಎಂದು ದೆಹಲಿ ಸಿಎಂ ಹೇಳಿದ್ದಾರೆ. ಈ ಮೂಲಕ ಕೊರೊನಾ ಸೋಂಕಿನಿಂದ ತಮ್ಮವರನ್ನು ಕಳೆದುಕೊಂಡವರ ಕಣ್ಣೀರು ಒರೆಸಲು ದೆಹಲಿ ಸರ್ಕಾರ ಪ್ರಯತ್ನ ಮಾಡಲಿದೆ. ಕೊರೊನಾ ಸೋಂಕಿನಿಂದ ಹೆತ್ತವರಿಬ್ಬರೂ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.

ಇದೇ ತೆರನಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಗುರುವಾರ ಕೊರೊನಾ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ‘ಉಚಿತ ಶಿಕ್ಷಣ ಹಾಗೂ ಇತರೆ ವೆಚ್ಚಗಳನ್ನು ಭರಿಸುವುದಾಗಿ ಘೋಷಣೆ ಮಾಡಿದ್ದರು. ಈ ಮೂಲಕ ಕೊರೊನಾ ಸೋಂಕಿನಿಂದ ತಮ್ಮವರನ್ನು ಕಳೆದುಕೊಂಡವರ ಕಣ್ಣೀರು ಒರೆಸಲು ಸರ್ಕಾರಗಳು ಪ್ರಯತ್ನ ಮಾಡುತ್ತಿದ್ದು, ನಿಜಕ್ಕೂ ಮೆಚ್ಚುಗೆಯ ನಿರ್ಧಾರವಾಗಿದೆ. ಪ್ರತಿ ರಾಜ್ಯಗಳು ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳಲಿ ಎಂಬುದು ನಮ್ಮ ಆಶಯ.

- Advertisement -

Related news

error: Content is protected !!