- Advertisement -
- Advertisement -
ನವದೆಹಲಿ: ದೆಹಲಿಯ ಮೋತಿ ನಗರದಲ್ಲಿರುವ ಹಾರ್ಲೆ ಡೇವಿಡ್ ಸನ್ ಬೈಕ್ ಶೋ ರೂಮ್ ನಲ್ಲಿ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದೆ. ಕಟ್ಟಡದ ಒಂದು ಮತ್ತು ಎರಡನೆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ.

ಮುಂಜಾನೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತ್ತು. 25 ಅಗ್ನಿ ಶಾಮಕ ವಾಹನಗಳ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಕಟ್ಟಡದ ಮೂರನೆ ಮಹಡಿಯಲ್ಲಿದ್ದ ನೈಟ್ ಕ್ಲಬ್ ನಲ್ಲಿ ಸಿಲುಕಿಕೊಂಡಿದ್ದ ನಾಲ್ಕು ಮಂದಿಯನ್ನು ರಕ್ಷಿಸಲಾಗಿದೆ. ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.


- Advertisement -