- Advertisement -
- Advertisement -
ನವದೆಹಲಿ: 2020ನೇ ವರ್ಷದಲ್ಲಿ ದೆಹಲಿ ಪೊಲೀಸರು 32 ಉಗ್ರರನ್ನು ಬಂಧಿಸಿದ್ದಾರೆ. ಇದು 2016ರ ನಂತರ ಗರಿಷ್ಠ ಸಂಖ್ಯೆಯಾಗಿದೆ ಎಂದು ದೆಹಲಿ ಪೊಲೀಸ್ ತಿಳಿಸಿದೆ.

ದೆಹಲಿ ಪೊಲೀಸರು 2019ರಲ್ಲಿ ಐದು, 2018ರಲ್ಲಿ ಎಂಟು, 2017ರಲ್ಲಿ 11 ಮತ್ತು 2016ರಲ್ಲಿ 16 ಭಯೋತ್ಪಾದಕರನ್ನು ಬಂಧಿಸಿದ್ದರು. ಕಳೆದ ವರ್ಷ ಐಸಿಸ್ ಉಗ್ರ ಕೇಂದ್ರವನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಉಗ್ರ ಚಟುವಟಿಕೆಗಳಿಗೆ ಮಟ್ಟ ಹಾಕುವಲ್ಲಿ ಯಶಸ್ಸು ಕಂಡಿದೆ.

- Advertisement -