Saturday, April 20, 2024
spot_imgspot_img
spot_imgspot_img

ವಕೀಲರೊಬ್ಬರ ಜೇಬಿನಲ್ಲಿ ಇರಿಸಿದ್ದ ಸ್ಮಾರ್ಟ್​ಫೋನ್ ಬ್ಲಾಸ್ಟ್!

- Advertisement -G L Acharya panikkar
- Advertisement -

ದೆಹಲಿ: ವಕೀಲರೊಬ್ಬರ ಜೇಬಿನಲ್ಲಿ ಇದ್ದಾಗಲೇ ಹೊಸದಾಗಿ ಖರೀದಿಸಿದ್ದ ಒನ್‌ ಪ್ಲಸ್‌ ಕಂಪೆನಿಯ ಸ್ಮಾರ್ಟ್​ಫೋನ್‌ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಕೀಲರೊಬ್ಬರ ಜೇಬಿನಲ್ಲಿ ಇದ್ದಾಗಲೇ ಹೊಸದಾಗಿ ಖರೀದಿಸಿದ್ದ ಒನ್‌ ಪ್ಲಸ್‌ ಕಂಪೆನಿಯ ಸ್ಮಾರ್ಟ್​ಫೋನ್‌ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಸ್ವತಃ ವಕೀಲ ಗೌರವ್‌ ಗುಲಾಟಿ ಸ್ಫೋಟಗೊಂಡಿರುವ ಮೊಬೈಲ್‌ ಫೋಟೋಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಸ್ಫೋಟದ ಸಮಯದಲ್ಲಿ ನಾನು ಫೋನ್ ಬಳಸಿರಲಿಲ್ಲ. ಜೊತೆಗೆ ಶೇ. 90ರಷ್ಟು ಚಾರ್ಜ್ ಫುಲ್ ಆಗಿತ್ತು. ಈ ಒನ್‌ ಪ್ಲಸ್‌ ಕಂಪೆನಿಯ ಫೋನ್‌ನಲ್ಲಿ ಮೊದಲು ಬೆಂಕಿ ಕಾಣಿಸಿದೆ. ನಂತರ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟಗೊಂಡಿದೆ. ಇದರಿಂದ ನನಗೂ ಗಾಯಗಳಾಗಿವೆ. ಇದೆಲ್ಲ ಕೋರ್ಟ್‌ ಆವರಣದಲ್ಲೇ ನಡೆಯಿತು ಎಂದು ಗೌರವ್‌ ಗುಲಾಟಿ ಬರೆದುಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಈ ವಿಚಾರದ ಬಗ್ಗೆ ಒನ್‌ಪ್ಲಸ್‌ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಫೋನ್‌ ತಯಾರಿಸಿದ ಕಂಪನಿಯನ್ನು ನಿಷೇಧಿಸಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಒನ್‌ಪ್ಲಸ್ ಸಂಸ್ಥೆ ಪ್ರತಿಕ್ರಿಯಿಸಿದ್ದು, ಫೋನ್ ಸ್ಫೋಟದ ಬಗ್ಗೆ ಪರಿಶೀಲನೆ ನಡೆಸದೆ ಪರಿಹಾರ ನೀಡುವುದಿಲ್ಲ. ಸ್ಫೋಟ ಹೇಗಾಯಿತು ಎಂದು ತಿಳಿಯಲು ಗೌರವ್‌ ಅವರನ್ನು ಸಂಪರ್ಕಿದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದೆ.

ಇನ್ನೂ ಒನ್ ಪ್ಲಸ್ ಕಂಪೆನಿ ಸ್ಮಾರ್ಟ್​ಫೋನ್ ಸ್ಫೋಟಗೊಳ್ಳುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಆಗಸ್ಟ್ ಮೊದಲ ವಾರದಲ್ಲಿ ಇದೇ ರೀತಿ ಫೋನ್‌ನಲ್ಲಿ ಬೆಂಕಿ ಕಾಣಿಸಿತ್ತು. ಒನ್ ಪ್ಲಸ್ ಫೋನ್ ಮಾರುಕಟ್ಟೆಗೆ ಬಂದು ಎರಡು ವಾರ ಕಳೆದಿವೆ. ಆದರೆ, ಬೇರೆ ಕಾರಣಗಳಿಂದ ಫೋನ್ ಸ್ಫೋಟಗೊಂಡಿದೆ ಎಂದು ಒನ್‌ಪ್ಲಸ್ ಸ್ಪಷ್ಟನೆ ನೀಡಿದೆ. ಅದೇನೆ ಇದ್ದರೂ ಫೋನ್ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಎರಡೆರಡು ಫೋನ್‌ ಸ್ಫೋಟ ಆಗಿರುವುದು ಬಳಕೆದಾರರಲ್ಲಿ ಆತಂಕ ಶುರುಮಾಡಿದೆ.

- Advertisement -

Related news

error: Content is protected !!