ಆಮಂತ್ರಣ ಪತ್ರ ವಿತರಣಾ ಸಭೆ ಹಾಗೂ ಅಂಗಣಕ್ಕೆ ಹಾರೆ ಹಾಕುವ ಕಾರ್ಯಕ್ರಮ





ಧರ್ಮನಗರ: 800 ವರ್ಷಗಳ ಇತಿಹಾಸ ಹೊಂದಿರುವ ಮಲರಾಯ ಜೇರದಲ್ಲಿ ವೈದ್ಯನಾಥ ಸಪರಿವಾರ ದೈವಗಳ ಸಾನಿಧ್ಯವೃದ್ಧಿ ವಾರ್ಷಿಕ ಮಹಾಪರ್ವ ಮತ್ತು ನೇಮೋತ್ಸವ ಡಿ. 23, 24, 25 ರಂದು ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರ ವಿತರಣಾ ಸಭೆ ಹಾಗೂ ಅಂಗಣಕ್ಕೆ ಹಾರೆ ಹಾಕುವ ಕಾರ್ಯಕ್ರಮ ನಡೆಯಿತು.

ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಕಾರಣಿಕ ಕ್ಷೇತ್ರ ‘ವೈದ್ಯನಾಥ ಮಲರಾಯ ಸಪರಿವಾರ ದೈವಸ್ಥಾನ ಮಲರಾಯ ಜೇರ. ಶಿವನ ಸಂಭೂತ ವೈದ್ಯನಾಥ ಈ ಕ್ಷೇತ್ರದಲ್ಲಿ ನೆಲಯಾಗಿ ತನ್ನ ಜೊತೆ ಮಲರಾಯ ದೈವ ಹಾಗೂ ಕೊರತಿ ದೈವಗಳನ್ನು ಈ ಕ್ಷೇತ್ರದಲ್ಲಿ ನಲೆಯಾಗಿಸಿಕೊಂಡು ಕಾರಣಿಕ ಶಕ್ತಿಯಾಗಿ ಈ ಕ್ಷೇತ್ರದಲ್ಲಿ ಭಕ್ತರನ್ನು ಕಾಪಾಡಿಕೊಂಡು ಬರುತ್ತಿದೆ.

350 ವರ್ಷಗಳ ಬಳಿಕ ಮಲರಾಯ ಜೇರ ಕ್ಷೇತ್ರ ಊರ ಹಿರಿಯರ, ಕಾರ್ಯಕರ್ತರ ಹಾಗೂ ಊರ ಪರವೂರ ಭಕ್ತಾದಿಗಳ ಶ್ರಮ ಸಹಕಾರದೊಂದಿಗೆ ವೈದ್ಯನಾಥ ಮತ್ತು ಮಲರಾಯ ದೈವಗಳಿಗೆ ಗುಡಿ ಗೋಪುರ, ಪಡಿಪ್ಪಿರೆ, ಗುಳಿಗೆ ಕೊರತಿ ದೈವಗಳಿಗೆ ಕಟ್ಟೆಗಳು ನಿರ್ಮಾಣಗೊಂಡು ಕಳೆದ ವರ್ಷ ಡಿ. 21 ರಿಂದ ಡಿ. 25 ರವರೆಗೆ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಹಾಗೂ ದೈವಗಳ ನೇಮೋತ್ಸವ ನಡೆದಿತ್ತು. ಈ ಬಾರಿಯೂ ವಾರ್ಷಿಕ ದಿನವಾದ ಡಿ. 23, 24, 25 ರಂದು ವೈದ್ಯನಾಥ ಸಪರಿವಾರ ದೈವಗಳ ಸಾನಿಧ್ಯವೃದ್ಧಿ ವಾರ್ಷಿಕ ಮಹಾಪರ್ವ ಮತ್ತು ನೇಮೋತ್ಸವ ನಡೆಯಲಿದೆ.

ಆಮಂತ್ರಣ ಪತ್ರ ವಿತರಣಾ ಸಭೆ ಹಾಗೂ ಅಂಗಣಕ್ಕೆ ಹಾರೆ ಹಾಕುವ ಕಾರ್ಯಕ್ರಮದಲ್ಲಿ ಸೀಮೆ ಗುರಿಕ್ಕಾರರು ಹಾಗೂ ಗೌರವಾಧ್ಯಕ್ಷರು ಕೆ.ಟಿ ವೆಂಕಟೇಶ್ವರ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರು ವಸಂತ ಕುಮಾರ್ ಅಮೈ, , ಸ್ವಾಗತ ಸಮಿತಿ ಅಧ್ಯಕ್ಷರು ಸತೀಶ್ ಶೆಟ್ಟಿ ಮೂಡೈಮಾರ್, ಉಪಾಧ್ಯಕ್ಷರು ಮೋಹನ್ ಭಟ್ ಉರಿಮಜಲು, ಸಂಘಟನಾ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಮೂಡೈಮಾರ್, ಸಂಚಾಲಕರು ಸುಧಾಕರ ಶೆಟ್ಟಿ ಬೀಡಿನಮಜಲು, ಪ್ರಧಾನ ಕಾರ್ಯದರ್ಶಿ ಈಶ್ವರ ನಾಯ್ಕ್, ಕೋಶಾಧಿಕಾರಿ ಸುರೇಂದ್ರ ಸುವರ್ಣ ದಲ್ಕಾಜೆಗುತ್ತು ಸೇರಿದಂತೆ ಊರಿನ ಸಮಸ್ತ ಕಾರ್ಯಕರ್ತರು ಉಪಸ್ಥಿತರಿದ್ದರು.









