- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ಕೊರೊನಾಕ್ಕಿಂತ ಬಿಜೆಪಿ ಭ್ರಷ್ಟಾಚಾರ ಡೇಂಜರ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಜತೆ ಸುದ್ದಿಗೋಷ್ಠಿ ನಡೆಸಿದ ಅವರು, ಕೊರೊನಾ ಮೆಡಿಕಲ್ ಕಿಟ್ ವಿಚಾರದಲ್ಲಿ ಸರ್ಕಾರದಿಂದ ಭಾರೀ ಭ್ರಷ್ಟಾಚಾರ ನಡೆದಿದೆ. 2 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ರು.
ಸರ್ಕಾರ ಹೆಣದ ಮೇಲೆ ಹಣ ಮಾಡೋಕೆ ಹೊರಟಿದೆ. ಇದನ್ನೂ ನೋಡಿಯೂ ನಾವು ಸುಮ್ಮರಿನಬೇಕಾ. ಕೊರೊನಾ ನಿಯಂತ್ರಣಕ್ಕಾಗಿ ವ್ಯವಸ್ಥೆಯನ್ನು ನೋಡಿಕೊಳ್ಳಲು ಬೆಂಗಳೂರಲ್ಲಿ ಅಷ್ಟದಿಕ್ಪಾಲಕರನ್ನು ಸರ್ಕಾರ ನೇಮಿಸಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಸುಲಿಗೆ ನಡೆಯುತ್ತಿದ್ದರೂ ಒಬ್ಬನೇ ಒಬ್ಬ ಸಚಿವ ಭೇಟಿ ನೀಡಲಿಲ್ಲ. ನಮ್ಮ ಜನರಿಗೆ ಕೊರೊನಾ ಸೋಂಕು ಹರಡಿಸಿದ್ದೀರಿ. ಇದರ ಜತೆಗೆ ಭ್ರಷ್ಟಾಚಾರದ ಸೋಂಕನ್ನು ಹಬ್ಬಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದ್ರು.
- Advertisement -