Sunday, June 14, 2026
spot_imgspot_img
spot_imgspot_img

ಕೋಕಂ ಅಥವಾ ಪುನರ್ಪುಳಿಯ ಸೇವನೆಯಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

- Advertisement -
- Advertisement -

ಕೋಕಂ ಅಥವಾ ಆಡು ಭಾಷೆಯಲ್ಲಿ ಪುನರ್ಪುಳಿ ಎಂದು ಕರೆಯಲ್ಪಡುವ ಈ ಹಣ್ಣು ಬೇಸಿಗೆಯಲ್ಲಿ ಫೇಮಸ್. ಬಿರುಬಿಸಿಲಿನಿಂದ ದಣಿದಾಗ, ಇದರ ಜ್ಯೂಸ್ ಮಾಡಿ ಸೇವಿಸಿದರೆ, ಮನಸ್ಸಿಗೆ ಉಲ್ಲಾಸದ ಜೊತೆಗೆ ದೇಹಕ್ಕೆ ತಂಪು.

ಒಣಗಿದ ಕೋಕಮ್ ಅನ್ನು ಹುಣಸೆಹಣ್ಣಿಗೆ ಪರ್ಯಾಯವಾಗಿ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ ಏಕೆಂದರೆ ಇದು ಹುಳಿ ರುಚಿ ಮತ್ತು ಸೌಮ್ಯವಾದ ಸಿಹಿಯನ್ನು ಹೊಂದಿರುತ್ತದೆ.

ಅಡುಗೆ ಉದ್ದೇಶಕ್ಕಾಗಿ ಮಾತ್ರವಲ್ಲದೆ, ಕೋಕಮ್ ಅನ್ನು ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ?. ಕೋಕಮ್ ಅಥವಾ ಪುನರ್ಪುಳಿ ಜ್ಯೂಸ್ ಅಥವಾ ಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಏನು ಲಾಭ ಎಂಬುದನ್ನು ಇಲ್ಲಿ ನೋಡೋಣ.

ಇಂದಿನ ವೇಗದ ಬದುಕಿನಲ್ಲಿ ಅಸಿಡಿಟಿಯು ಮುಖ್ಯ ಜೀರ್ಣಕಾರಿ ಸಮಸ್ಯೆಯಾಗಿದೆ. ಆದರೆ ಕೋಕಮ್ ಪಲ್ಸ್ ಈ ಸಮಸ್ಯೆಯಿಂದ ನಿಮಗೆ ಪರಿಹಾರ ನೀಡುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಇದನ್ನು ಜ್ಯೂಸ್ ಅಥವಾ ಶರಬತ್ ರೂಪದಲ್ಲಿ ಸೇವಿಸಿ.

ಬಿರುಕು ಬಿಟ್ಟ ಹಿಮ್ಮಡಿಗಳನ್ನು ಎದುರಿಸುತ್ತಿದ್ದರೆ ಅದನ್ನು ಗುಣಪಡಿಸಲು ಕೋಕಂ ಪೇಸ್ಟ್ ಅನ್ನು ಬಳಸಿ. ಇದನ್ನು ಸಾಬೂನುಗಳು, ಚರ್ಮದ ಲೋಷನ್‌ಗಳು ಮತ್ತು ಮುಲಾಮುಗಳಂತಹ ಸೌಂದರ್ಯವರ್ಧಕ ಉತ್ಪನ್ನಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ. ತೆಂಗಿನ ಎಣ್ಣೆಯೊಂದಿಗೆ ಕೋಕಮ್ ಪೇಸ್ಟ್ ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ಪರಿಣಾಮಕಾರಿಯಾಗಿದೆ, ಜೊತೆಗೆ ಇದು ಚರ್ಮದ ದದ್ದುಗಳು ಮತ್ತು ಗುಳ್ಳೆಗಳಿಗೆ ಪರಿಹಾರವಾಗಿದೆ.

ಕೋಕಂ ಅಥವಾ ಪುನರ್ಪುಳಿ ಎಂಬ ತಿನ್ನಬಹುದಾದ ಹಣ್ಣನ್ನು ಶರಬತ್ತು ಅಥವಾ ಜ್ಯೂಸ್ ಆಗಿ ತಯಾರಿಸಿದಾಗ ನಿಮ್ಮ ಬಾಯಾರಿಕೆ ನೀಗುತ್ತದೆ. ಜೊತೆಗೆ ಹೀಗೆ ಮಾಡುವುದರಿಂದ ನಿಮ್ಮ ದೇಹವೂ ತಂಪಾಗುತ್ತದೆ, ಏಕೆಂದರೆ ಇದರಲ್ಲಿ ದೇಹವನ್ನು ತಂಪಾಗಿಸುವ ಗುಣ ಇದೆ.
ಕೋಕಮ್ ಅದರ ಬ್ಯಾಕ್ಟಿರಿಯಾ ವಿರೋಧಿ ಗುಣವು ಅಜೀರ್ಣ ಮತ್ತು ವಾಯು ಮುಂತಾದ ಗ್ಯಾಸ್ಟಿಕ್ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಜೊತೆಗೆ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟಿರಿಯಾವನ್ನು ರಕ್ಷಿಸಿ, ಹೊಟ್ಟೆಯಿಂದ ಹಾನಿಕಾರಕ ಬ್ಯಾಕ್ಟಿರಿಯಾವನ್ನು ನಾಶಮಾಡಲು ಇದು ಸಹಕಾರಿಯಾಗಿದೆ.
ಹೈಡ್ರಾಕ್ಸಿ ಸಿಟ್ರಿಕ್ ಆಮ್ಲ ಎಂದು ಕರೆಯಲ್ಪಡುವ ಸಂಯುಕ್ತವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಕೋಕಮ್ ಈ ಸಂಯುಕ್ತದ ಶ್ರೀಮಂತ ಮೂಲವಾಗಿದ್ದು, ಸ್ಕೂಲಕಾಯತೆಯನ್ನು ತಡೆಯುವುದಲ್ಲದೇ, ಅತಿಯಾಗಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

- Advertisement -

Related news

error: Content is protected !!