Sunday, October 6, 2024
spot_imgspot_img
spot_imgspot_img

ಡೊನಾಲ್ಡ್ ಟ್ರಂಪ್‌ ಮೇಲೆ ಮತ್ತೆ ಗುಂಡಿನ ದಾಳಿ

- Advertisement -
- Advertisement -

ವಾಷಿಂಗ್ಟನ್ : ಅಮೇರಿಕದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ.

ಫ್ಲೋರಿಡಾದ ಗಾಲ್ಫ್ ಕ್ಲಬ್ ನಲ್ಲಿದ್ದ ಟ್ರಂಪ್ ಮೇಲೆ ಅಜ್ಞಾತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ, ಟ್ರಂಪ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದೇ ವರ್ಷ ಜುಲೈ 13ರಂದು ಅವರ ಮೇಲೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿರುವ ಬಟ್ಲರ್ ಎಂಬಲ್ಲಿ ಗುಂಡಿನ ದಾಳಿಯಾಗಿತ್ತು. ಅಂದು ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಅವರ ಮೇಲೆ ಸುಮಾರು 442 ಅಡಿಗಳಷ್ಟು ದೂರದಿಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದರು. ಅಂದು ಹಾರಿದ ಗುಂಡು ಅವರ ಬಲಕಿವಿಯ ತುದಿಗೆ ತಾಕಿ ರಕ್ತ ಸೋರಿಕೆಯಾಗಿತ್ತು. ಕೂದಲೆಳೆ ಅಂತರದಲ್ಲಿ ಟ್ರಂಪ್‌ ಪಾರಾಗಿದ್ದರು. ಇದಾದ ಕೆಲವೇ ದಿನಗಳ ನಂತರ ಇದೀಗ ಮತ್ತೊಂದು ಗುಂಡಿನ ದಾಳಿ ನಡೆದಿದೆ. ಹೀಗಾಗಿ ಟ್ರಂಪ್‌ ಬೆಂಬಲಿಗರ ಆತಂಕಕ್ಕೆ ಕಾರಣವಾಗಿದೆ.

ಫ್ಲೋರಿಡಾದ ಸ್ಥಳೀಯ ಕಾಲಮಾನ ಸೆ. 15ರಂದು ಸಂಜೆಯಲ್ಲಿ ಫ್ಲೋರಿಡಾದಲ್ಲಿರುವ ವೆಸ್ಟ್ ಪಾಮ್ ಬೀಚ್ ನಲ್ಲಿರುವ ತಮ್ಮದೇ ಗಾಲ್ಫ್ ಕ್ಲಬ್ ಆದ ಟ್ರಂಪ್ ಇಂಟರ್ ನ್ಯಾಷನಲ್ ಗಾಲ್ಫ್ ಕ್ಲಬ್‌ಗೆ ಟ್ರಂಪ್ ಆಗಮಿಸಿದ್ದರು. ತಮ್ಮ ಸ್ವಂತ ಗಾಲ್ಫ್ ಕ್ಲಬ್‌ಗೆ ಹೋಗಿದ್ದರು. ಗಾಲ್ಫ್ ಆಟ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.

- Advertisement -

Related news

error: Content is protected !!