Saturday, April 27, 2024
spot_imgspot_img
spot_imgspot_img

ಯಕ್ಷಲೋಕದ ‘ಛಂದೋಬ್ರಹ್ಮ’ ಡಾ. N. ಶಿಮಂತೂರು ನಾರಾಯಣ ಶೆಟ್ಟಿ ವಿಧಿವಶ.

- Advertisement -G L Acharya panikkar
- Advertisement -

ಮಂಗಳೂರು: ಯಕ್ಷಗಾನ ಪ್ರಸಂಗಕರ್ತ ಮತ್ತು ಕನ್ನಡ ಛಂದಸ್ಸುಗಳ ಕುರಿತಾಗಿ ಆಳವಾದ ಅಧ್ಯಯನವನ್ನು ನಡೆಸಿದ್ದ ಡಾ. ಎನ್. ಶಿಮಂತೂರು ಶೆಟ್ಟಿ ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಕಳೆದ ಕೆಲವು ಸಮಯಗಳಿಂದ ಅನಾರೋಗ್ಯಕ್ಕೀಡಾಗಿದ್ದ ನಾರಾಯಣ ಶೆಟ್ಟರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೆಟ್ಟರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ನಾರಾಯಣ ಶೆಟ್ಟಿ ಅವರಿಗೆ 86 ವರ್ಷ ಪ್ರಾಯವಾಗಿತ್ತು. ಅವರು ರಚಿಸಿರುವ ‘ಯಕ್ಷಗಾನ ಛಂದೋಂಬುಧಿ’ ಮಹಾಗ್ರಂಥಕ್ಕೆ ಹಂಪಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪ್ರಧಾನ ಮಾಡಿತ್ತು.ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿ ಮೊದಲಿಗೆ ಸಲ್ಲಿಕೆಯಾಗಿದ್ದೇ ಡಾ. ಶಿಮಂತೂರು ನಾರಾಯಣ ಶೆಟ್ಟರಿಗೆ ಎನ್ನುವುದು ಅವರ ಸಾಧನೆಗೆ ಸಂದ ಹೆಗ್ಗಳಿಕೆಯೇ ಸರಿ. ಇದರ ಹೊರತಾಗಿ ‘ಯಕ್ಷಾಂಗಣ ಮಂಗಳೂರು’, ಪಟ್ಲ ಫೌಂಡೇಶನ್ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿಯೂ ಡಾ. ಶೆಟ್ಟರ ಪಾಲಿಗೆ ಸಂದಿವೆ.

ಶಿಕ್ಷಕರಾಗಿ, ಯಕ್ಷಗಾನ ಛಂದಸ್ಸು ಕ್ಷೇತ್ರದ ಸಾಧಕನಾಗಿ, ಕವಿ, ವಿಮರ್ಶಕ, ಪ್ರಸಂಗಕರ್ತರಾಗಿ ಸಾಹಿತ್ಯ, ಯಕ್ಷಗಾನ ಕ್ಷೇತ್ರಕ್ಕೆ ನಾರಾಯಣ ಶೆಟ್ಟಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಯಕ್ಷಗಾನ ಛಂದೋಂಬುಧಿ ಎನ್ನುವ ತನ್ನ ಗ್ರಂಥದ ಮೂಲಕ ಶಿಮಂತೂರು ಅವರು ಅಜರಾಮರರಾಗಲಿದ್ದಾರೆ. ‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗವನ್ನು ಎಳವೆಯಲ್ಲಿಯೇ ರಚಿಸುವ ಮೂಲಕ ಶಿಮಂತೂರು ಅವರು ಪ್ರಖ್ಯಾತಿ ಪಡೆದವರು.ಅಪಾರ ಅಭಿಮಾನಿ ಬಳಗವನ್ನೆ ಆಗಲಿರುವ ಡಾ.ನಾರಾಯಣ ಶೆಟ್ಟಿ ಅವರ ನಿಧನಕ್ಕೆ ರಾಜಕೀಯ, ಸಾಮಾಜಿಕ ಹಾಗೂ ಸಮಾಜದ ಎಲ್ಲಾ ವರ್ಗದ ನಾಯಕರೂ ಸಂತಾನವನ್ನು ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!