Sunday, May 19, 2024
spot_imgspot_img
spot_imgspot_img

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಆ್ಯಂಟಿ ಕೋವಿಡ್ ಔಷಧಿ ಇಂದು ಬಿಡುಗಡೆ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಡಲು ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಅಭಿವೃದ್ಧಿಪಡಿಸಿರುವ ಆ್ಯಂಟಿ ಕೋವಿಡ್ ಔಷಧಿ ಇಂದು ಬಿಡುಗಡೆಯಾಗಲಿದೆ.

2-ಡಿಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಎಂಬ ಔಷಧಿಯನ್ನು ಡಿಆರ್‌ಡಿಒ ಅಭಿವೃದ್ಧಿ ಪಡಿಸಿದ್ದು, ಈ ಔಷಧಿಗೆ ಇತ್ತೀಚೆಗಷ್ಟೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿತ್ತು. ಈ ಔಷಧಿ ಕೋವಿಡ್ ರೋಗಿಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ವೈದ್ಯಕೀಯ ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಎರಡು ಹಂತಗಳಲ್ಲಿ ಆ್ಯಂಟಿ ಕೋವಿಡ್ ಔಷಧಿಯ ಸಂಶೋಧನೆ ನಡೆಸಲಾಗಿದೆ. ಗ್ಲೂಕೋಸ್‍ನ ಜೆನೆರಿಕ್ ಅಣು ಆಗಿರುವುದರಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿಸಬಹುದು ಎಂದು ಡಿಆರ್‌ಡಿಒ ತಿಳಿಸಿತ್ತು. ಹೈದರಾಬಾದ್ ನ ಡಾ. ರೆಡ್ಡೀಸ್ ಲ್ಯಾಬ್ ಈ ಔಷಧ ಉತ್ಪಾದನೆಯಲ್ಲಿ ಡಿಆರ್ಡಿಓದ ಪಾಲುದಾರ ಸಂಸ್ಥೆಯಾಗಿದೆ.

driving
- Advertisement -

Related news

error: Content is protected !!