Friday, June 27, 2025
spot_imgspot_img
spot_imgspot_img

ಮಧ್ಯ ಸೇವನೆ ಮಾಡಿ ವಾಹನ ಚಾಲನೆ ಹಾಗೂ ಅತೀವೇಗದ ವಾಹನ ಚಾಲನೆ ಬಗ್ಗೆ ಮಂಗಳೂರು ನಗರ ಪೊಲೀಸರಿಂದ ಸೂಚನೆ

- Advertisement -
- Advertisement -

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಂಚಾರ ದಕ್ಷಿಣ ಪೊಲೀಸ್ ಠಾಣಾ ಸರಹದ್ದಿನ ಜಪ್ಪಿನಮೊಗರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಿನಾಂಕ: 18-06-2025 ರಂದು ಮುಂಜಾನೆ 01.30ರ ವೇಳೆಗೆ ವೇಳೆಗೆ KA-19-MN-6698 ನೇ ನಂಬ್ರದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಅಮನ್ ರಾವ್ (22) ಸಹ ಪ್ರಯಾಣಿಕ ಓಂಶ್ರೀ(24) ರವರು ಮೃತಪಟ್ಟು, ಸಹ ಪ್ರಯಾಣಿಕರಾದ ಆಶಿಶ್(23), ವಿದೇಶಿ ಪ್ರಜೆ ಜೆರಿ (23) ರವರುಗಳು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮೊ.ನಂ.152/2025 ಕಲಂ:281, 125(ಎ), 125(ಬಿ), 106(1) BNS ಜೊತೆಗೆ 183, 185 ಐ.ಎಮ್.ವಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು, ಈ ಅಪಘಾತಕ್ಕೆ ಸಂಬಂಧಿಸಿದಂತೆ ಕಾರಿನ ಚಾಲಕ ಮಧ್ಯ ಸೇವನೆ ಮಾಡಿ ಅತೀವೇಗದಲ್ಲಿ ವಾಹನ ಚಾಲನೆ ಮಾಡಿರುವುದು ತನಿಖಾ ಕಾಲದಲ್ಲಿ ಕಂಡುಬಂದಿರುತ್ತದೆ. ಈ ಸಂಬಂಧ ಭಾರತೀಯ ಮೋಟಾರು ವಾಹನ ಕಾಯಿದೆ ಅನ್ವಯ ಕಲಂ: 185 ಮತ್ತು 183 ಯನ್ನು ಅಳವಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.ಈ ಬಗ್ಗೆ ಸಾರ್ವಜನಿಕರಿಗೆ ಮಂಗಳೂರು ನಗರ ಪೊಲೀಸ್ ತಿಳಿಯಪಡಿಸುವುದೇನೆಂದರೆ,

1. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ರಸ್ತೆ ಅಪಘಾತ ಉಂಟಾಗಿ ಚಾಲಕ, ಪ್ರಯಾಣಿಕರು ಸಾವು ನೋವುಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರ ಪರಿಣಾಮ ಕುಟುಂಬ ಮತ್ತು ಅವಲಂಭಿತರ ಮೇಲೆ ಪ್ರಭಾವ ಬಿದ್ದು ದುಖಃ ಅನುಭವಿಸುತ್ತಾರೆ.

2. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟಾರು ವಾಹನ ಕಾಯಿದೆ ಕಲಂ 185 ಅನ್ವಯ ಪ್ರಕರಣ ದಾಖಲಿಸಿ ರೂ 10,000/- ವರೆಗೆ ದಂಡ ಪಾವತಿಸಬೇಕಾಗುತ್ತದೆ.

3. ಅತೀವೇಗದಿಂದ (Over Speed) ವಾಹನ ಚಲಾಯಿಸಿದಲ್ಲಿ ರಸ್ತೆ ಅಪಘಾತ ಉಂಟಾಗಿ ಚಾಲಕ, ಪ್ರಯಾಣಿಕರು ಮತ್ತು ಕುಟುಂಬಸ್ಥರು ಸಾವು ನೋವುಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಅತೀವೇಗದಿಂದ (Over Speed) ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟಾರು ವಾಹನ ಕಾಯಿದೆ ಕಲಂ 183 ಅನ್ವಯ ಪ್ರಕರಣ ದಾಖಲಿಸಿ 2/3/LMV- ವಾಹನಗಳಿಗೆ ರೂ 1,000/-, HMV/HGV/OTHERS- ವಾಹನಗಳಿಗೆ 2,000/- ವರೆಗೆ ದಂಡ ಪಾವತಿಸಬೇಕಾಗುತ್ತದೆ. ಅದುದರಿಂದ ಮಧ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬಾರದು ಹಾಗೂ ಅತೀವೇಗದಿಂದ (Over Speed) ವಾಹನ ಚಾಲನೆ ಮಾಡದೇ ಎಚ್ಚರದಿಂದ ವಾಹನ ಚಾಲನೆ ಮಾಡುವಂತೆ ಸಾರ್ವಜನಿಕರಿಗೆ ಈ ಮೂಲಕ ಮಂಗಳೂರು ನಗರ ಪೊಲೀಸ್ ಕೋರಿದೆ.

- Advertisement -

Related news

error: Content is protected !!