Saturday, May 18, 2024
spot_imgspot_img
spot_imgspot_img

ಬೇಸಿಗೆಯಲ್ಲಿ ಎಳನೀರು ಸೇವನೆ ಅತ್ಯಂತ ಉಪಯುಕ್ತ

- Advertisement -G L Acharya panikkar
- Advertisement -
This image has an empty alt attribute; its file name is shri-energy-solar-667x1024.jpeg

ಎಳನೀರು ಪ್ರಕೃತಿ ನೀಡಿರುವಂತಹ ಇದುವರೆಗೂ ಕಲಬೆರಕೆಗೊಳ್ಳದೇ ಇರುವಂತಹ ನ್ಯೂಟ್ರಿಷಿಯಸ್‌ ಡ್ರಿಂಕ್‌. ಇದರಲ್ಲಿ ಮಿನರಲ್ಸ್‌, ವಿಟಮಿನ್ಸ್‌, ಕಾರ್ಬೊಹೈಡ್ರೇಟ್ಸ್‌ ಇನ್ನೂ ಮುಂತಾದ ಅಂಶಗಳು ಪ್ರಕೃತಿದತ್ತವಾಗಿರುವುದರಿಂದ ಬೇಸಿಗೆಯಲ್ಲಿ ಎಳನೀರು ಸೇವನೆ ಅತ್ಯಂತ ಉಪಯುಕ್ತ.

ಎಳನೀರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಶೇಷವಾಗಿ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳಿವೆ. ಇವೆಲ್ಲವೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎಳನೀರು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್‌ ಹಾಗೂ ಫ್ಯಾಟ್‌ ಫ್ರೀ ಆಗಿರುವ ಎಳನೀರಿನ ಸೇವನೆ ಹೃದಯಕ್ಕೆ ಅತ್ಯುತ್ತಮವಾದ ಮನೆಮದ್ದಾಗಿದೆ . ಎಳನೀರಿನೊಂದಿಗೆ ಯಾವುದೇ ಮಿಶ್ರಣವನ್ನು ಮಾಡದೇ ಸೇವಿಸುವುದರಿಂದ ರುಚಿ ಕೂಡ ತುಂಬಾ ಚೆನ್ನಾಗಿರುತ್ತದೆ.

ಬೇಸಿಗೆಯಲ್ಲಿ ಎಳನೀರು: ಬೇಸಿಗೆಯಲ್ಲಿ ಎಳನೀರು ಕುಡಿದರೆ ದೇಹ ತೇವಾಂಶದಿಂದ ಕೂಡಿರುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ತುಂಬಾ ಹೊತ್ತು ಹೊಟ್ಟೆ ತುಂಬಿಸಿರುತ್ತದೆ.

ಎಳನೀರು ಸೇವನೆಯಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯುವ ಶಕ್ತಿ ಎಳನೀರಿಗಿದೆ. ಜೊತೆಗೆ ಆರೋಗ್ಯಕ್ಕೂ ಉತ್ತಮವಾದುದು ಎಳನೀರು ಸೇವನೆ.

ಎಳನೀರು ಕುಡಿದರೆ ಅದರಲ್ಲಿರುವ ಪದಾರ್ಥಗಳು ಹೊಟ್ಟೆ ತುಂಬಾ ಹೊತ್ತು ತುಂಬಿರುವಂತೆ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕ ಇಳಿಕೆಗೆ ಸಹಾಯಕವಾಗಿದೆ.

ಎಳನೀರಿಗೆ ಕರುಳಿನ ಕಾರ್ಯವನ್ನು ಸರಾಗವಾಗಿ ನಿರ್ವಹಿಸುವ ಶಕ್ತಿ ಇದೆ. ಆದುದರಿಂದ ಕನಿಷ್ಠ ವಾರಕ್ಕೊಂದು ಎಳನೀರು ಕುಡಿದರೆ ಅನಿಯಮಿತವಾಗಿ ಆಗುವಂತಹ ಮಲಮೂತ್ರ ವಿಸರ್ಜನೆಯು ಸರಾಗವಾಗಿ ಆಗುತ್ತದೆ.

- Advertisement -

Related news

error: Content is protected !!