- Advertisement -
- Advertisement -



ಬೆಂಗಳೂರು: ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯಾ ನಟನನ್ನು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಕ್ವಿಮ್ ಮಾಲ್ವಿನ್ ಎಂಬಾತ ಬಂಧಿತ ಡ್ರಗ್ ಪೆಡ್ಲರ್ ಹಾಗೂ ನಟ ಆಗಿದ್ದಾನೆ. ಮೆಡಿಕಲ್ ವೀಸಾದಲ್ಲಿ ಬಂದಿದ್ದ ಚಕ್ವಿಮ್ ಮಾಲ್ವಿನ್, ಫಿಲ್ಮ್ ಅಕಾಡೆಮಿಯಲ್ಲಿ ನಟನೆಯ ತರಬೇತಿ ಪಡೆದಿದ್ದ ಎಂದು ತಿಳಿದುಬಂದಿದೆ.

ಕನ್ನಡದ ಅಣ್ಣಾಬಾಂಡ್, ಪರಮಾತ್ಮ, ತಮಿಳಿನ ಸಿಂಗಂ, ವಿಶ್ವರೂಪಂ ಸೇರಿ 20 ಚಿತ್ರಗಳಲ್ಲಿ ಸಹನಟನಾಗಿಯೂ ಆತ ನಟಿಸಿದ್ದ. ಆರೋಪಿ ನಟನಿಂದ 8 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್, ಎಂಡಿ ಎಂಎ ಜಪ್ತಿ ಮಾಡಲಾಗಿದೆ. ಆರೋಪಿ ಬಳಿಯಿದ್ದ 10 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.

ಆರೋಪಿಗೆ ನಟನೆ ಫ್ಯಾಷನ್, ಡ್ರಗ್ಸ್ ಪೆಡ್ಲಿಂಗ್ ವೃತ್ತಿಯಾಗಿದೆ. ಆರೋಪಿ ವಿದೇಶಗಳಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಬ್ಯುಸಿನೆಸ್ ಮ್ಯಾನ್‌ಗಳು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಮಾಹಿತಿ ನೀಡಿದ್ದಾರೆ.



- Advertisement -