Friday, May 3, 2024
spot_imgspot_img
spot_imgspot_img

ಕುಡಿದ ನಶೆಯಲ್ಲಿ ಕಟ್ಟಡ ಮೇಲಿಂದ ಆಯಾತಪ್ಪಿ ಬಿದ್ದು ಕಾರ್ಮಿಕ ಮೃತ್ಯು..!

- Advertisement -G L Acharya panikkar
- Advertisement -

ರಾತ್ರಿ ಗೆಳೆಯರೊಂದಿಗೆ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದ ನಶೆಯಲ್ಲಿ ನಿರ್ಮಾಣ ಹಂತದ ಕಟ್ಟಡವನ್ನೇರಿದ್ದ. ಕಟ್ಟಡದ ಮೇಲೆ ಮಲಗಿದ್ದ ಇತ ಮಧ್ಯರಾತ್ರಿ ಎಚ್ಚರವಾಗಿ ಅದೇ ನಶೆಯಲ್ಲಿ ತೂರಾಡಿಕೊಂಡು ಆಯಾತಪ್ಪಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟ ಕಾರ್ಮಿಕ ಅಮಿತ್ ಚಾಂಗ್ (32) ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಈ ದುರ್ಘಟನೆ ನಡೆದಿದೆ. ನಿನ್ನೆ ಭಾನುವಾರ ಆಗಿದ್ದರಿಂದ ಅಮಿತ್ ಚಾಂಗ್ ರಾತ್ರಿ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದ. ಪಾರ್ಟಿ ಬಳಿಕ ಕಟ್ಟಡದ ಮೇಲೆ ಮಲಗಿದ್ದ. ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಎದ್ದಾಗ ಆಯಾತಪ್ಪಿ ಕಟ್ಟಡದಿಂದ ಬಿದ್ದಿದ್ದಾನೆ. ಮೇಲಿಂದ ಬಿದ್ದ ರಭಸಕ್ಕೆ ಅಮಿತ್‌ ತಲೆಗೆ ತೀವ್ರ ಪೆಟ್ಟಾಗಿತ್ತು. ರಕ್ತಸ್ರಾವದಿಂದ ಸ್ಥಳದಲ್ಲಿ ಮೃತಪಟ್ಟಿದ್ದ. ಮುಂಜಾನೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

- Advertisement -

Related news

error: Content is protected !!