- Advertisement -
- Advertisement -
ಬೆಂಗಳೂರು: ಕೊರೊನಾ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಸರ್ಜಾ ಕುಟುಂಬಕ್ಕೆ ಆತಂಕ ದೂರವಾಗಿದೆ.
ನಿನ್ನೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಧ್ರುವ ಸರ್ಜಾ ಸ್ವತಃ ಟ್ವೀಟ್ ಮಾಡಿದ್ದರು.
ಆದರೆ ಸಣ್ಣ ಜ್ವರ ಬಿಟ್ಟರೆ ಬೇರೆ ಯಾವುದೇ ಕೊರೊನಾ ಲಕ್ಷಣ ಇಲ್ಲದ ಕಾರಣ ಮನೆಯಲ್ಲೇ ಕ್ವಾರಂಟೈನ್ ನಲ್ಲಿರುವುದಕ್ಕೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಇಬ್ಬರು ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ.
- Advertisement -