ಕರ್ನಾಟಕ DTE ಮಂಡಳಿಯ ವಿರುದ್ದವಾಗಿ ಇಂದು ಸುಂಕದಕಟ್ಟೆ SNS ಕಾಲೇಜು ಮುಂಭಾಗದಲ್ಲಿ ಡಿಪ್ಲೋಮಾ ವಿದ್ಯಾರ್ಥಿ ಯುವ ಆಂದೋಲನ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು, ಈ ಸಂಧರ್ಭದಲ್ಲಿ DTE ಮಂಡಳಿಯ ವಿರುಧ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು,ಈ ಹಿಂದೆ ಹಲವು ಬಾರಿ DTE ಮಂಡಳಿಗೆ ಕರೆ ಮಾಡಿ ಪರೀಕ್ಷೆಯನ್ನ ಮುಂದೂಡುವಂತೆ ಮನವಿ ಮಾಡಿದರೂ ಕ್ಯಾರೇ ಅನ್ನದೇ ವಿದ್ಯಾರ್ಥಿಗಳಲ್ಲಿ ಬೇಜವ್ದಾರಿಯಿಂದ ಮಾತನಾಡಿದ್ದಾರೆ ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿ ಮಾದ್ಯಮಗಳ ಮುಂದೆ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡಿದ್ದಾರೆ.


.ಯಾವುದೇ ತರಗತಿ ನಡೆಸದೇ,ಪಠ್ಯವನ್ನ ಪೂರ್ತಿಗೊಳಿಸದೇ ಪರೀಕ್ಷೆ ನಡೆಸುವ DTE ಕ್ರಮದ ವಿರುದ್ಧ ರಾಜ್ಯ ವಿದ್ಯಾರ್ಥಿ ನಾಯಕರಾದ ಭಾತೀಷ್ ಅಳಕೆಮಜಲು ಖಂಡನೆ ವ್ಯಕ್ತಪಡಿಸಿದರು ಹಾಗೂ 3 ತಿಂಗಳ ಮಟ್ಟಿಗೆ ಪರೀಕ್ಷೆಯನ್ನ ಮುಂದೂಡುವಂತೆ ಆಗ್ರಹಿಸಿದರು ಹಾಗೂ ಜಿಲ್ಲಾ ವಿದ್ಯಾರ್ಥಿ ಮುಂಖಂಡರಾದ ಅನ್ವಿತ್ ಕಟೀಲ್ರವರು ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿ ಈ ಪ್ರತಿಭಟನೆಯು ಇನ್ನು ಮುಂದೆ ಜಿಲ್ಲಾದ್ಯಂತ ನಡೆಸುವ ಮುನ್ಸೂಚನೆಯನ್ನ ನೀಡಿದರು.



ಈ ಸಂಧರ್ಭದಲ್ಲಿ ವಿದ್ಯಾರ್ಥಿ ಸಂಘದ ನಾಯಕರಾದ ಗುರುದತ್ ಮಲ್ಲಿ ಹಾಗೂ ಡಿಪ್ಲೋಮಾ ಸ್ಟೂಡೆಂಟ್ ಯೂತ್ ಮೂವ್ಮೆಂಟ್ ಇದರ ಅಧ್ಯಕ್ಷರಾದ ಸಾಗರ್ ಸಾಲಿಯಾನ್, ನಾಗರಾಜ್, ರಕ್ಷಿತ್ ಉಪಸ್ಥಿತರಿದ್ದರು.

