Friday, May 17, 2024
spot_imgspot_img
spot_imgspot_img

ಕೂದಲು ಉದುರುವಿಕೆ ತಡೆಗಟ್ಟಲು ಸುಲಭ ಉಪಾಯ

- Advertisement -G L Acharya panikkar
- Advertisement -

ಕೂದಲು ಉದುರುವಿಕೆ ಇಂದಿನ ದಿನದಲ್ಲಿ ಸಾಮಾನ್ಯವಾದ ವಿಚಾರವಾಗಿಬಿಟ್ಟಿದೆ. ಮಾಲಿನ್ಯ, ನೀರಿನಲ್ಲಿ ಬೆರೆಸುವ ರಾಸಾಯನಿಕ ಸೇರಿ, ನಗರಗಳಲ್ಲಿಪುರುಷರು ಹಾಗೂ ಮಹಿಳೆಯರಿಬ್ಬರಲ್ಲೂ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುತ್ತಿದೆ.

ಕೂದಲು ಉದುರುವುದನ್ನು ತಡೆಗಟ್ಟಲು ಬಾಹ್ಯಾ ಹಾಗೂ ಆಂತರಿಕ ಆರೈಕೆ ಬಹುಮುಖ್ಯ, ನಮ್ಮ ಆಹಾರಕ್ರಮ, ಜೀವನಶೈಲಿ ಕೂಡ ಕೂದಲಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ಈ ರೀತಿಯ ಆಹಾರಕ್ರಮದಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು:

  • ಅತ್ಯಧಿಕ ಖಾರ, ಉಪ್ಪು, ಉಳಿ ಆಹಾರ ಸೇವನೆ
  • ಕಾಫಿ ಕುಡಿಯುವ ಚಟ
  • ಮದ್ಯಪಾನ
  • ಅತೀಹೆಚ್ಚು ಆಹಾರ ಸೇವನೆ
  • ಧೂಮಪಾನ
  • ಎಣ್ಣೆಯಲ್ಲಿ ಕರಿದ ಪದಾರ್ಥಗಳು
  • ಅಸಿಡಿಟಿ ಆಹಾರಗಳು
    ಇವುಗಳು ಪಿತ್ತವನ್ನು ಹೆಚ್ಚುಮಾಡುತ್ತದೆ ಇದರಿಂದಾಗಿ ಕೂದಲು ಉದುರುವುದು

ಬೆಣ್ಣೆಹಣ್ಣುಇದರಲ್ಲಿ ಆರೋಗ್ಯಕರ ಕೊಬ್ಬಿನಂಶವಿದೆ ಹಾಗೂ ಕೂದಲಿಗೆ ಅಗತ್ಯವಾದ ವಿಟಮಿನ್ ಇ ಇದ್ದು 200ಗ್ರಾಂ ಬೆಣ್ಣೆ ಹಣ್ಣು ತಿನ್ನುವುದರಿಂದ ಕೂದಲು ಆರೋಗ್ಯಕರವಾಗಿ ಬೆಳೆಯುವುದು.

ಬೀನ್ಸ್‌ನಲ್ಲಿ ಸತುವಿನಂಶವಿದ್ದು 100ಗ್ರಾಂ ಬೀನ್ಸ್ ತಿಂದರೆ ನಿಮಗೆ ದಿನನಿತ್ಯ ಬೇಕಾಗುವ ಸತುವಿನಲ್ಲಿ ಶೇ. 7ರಷ್ಟು ಲಭ್ಯವಾಗುತ್ತದೆ.
ಮೊಟ್ಟೆಯಲ್ಲಿ ಪ್ರೊಟೀನ್‌ ಹಾಗೂ ಬಯೋಟಿನ್‌ ಅಂಶವಿರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ಪ್ರೊಟೀನ್ ಅಂಶ ಕಡಿಮೆಯಾದರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಇನ್ನು ಇದರಲ್ಲಿರುವ ಬಯೋಟಿನ್‌ ಕೂದಲು ದಪ್ಪವಾಗಿ ಬೆಳೆಯಲು ಸಹಕಾರಿ.

ಚೆನ್ನಾಗಿ ನೀರು ಕುಡಿಯಿರಿ
ಹೌದು, ಕೂದಲಿನ ಶೇ.25ರಷ್ಟು ಜೀವಕೋಶಗಳು ನೀರಿನಿಂದ ನಿರ್ಮಿತವಾಗಿರುತ್ತದೆ. ದೇಹ ನಿರ್ಜಲೀಕರಣಗೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಕೂದಲಿನ ಬೇರುಗಳು ಗಟ್ಟಿಯಾಗಿರಲು ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿರುವುದು ಅತ್ಯಂತ ಅಗತ್ಯ. ದಿನವೊಂದರಲ್ಲಿ ಕನಿಷ್ಟ 8 ಲೋಟಗಳಷ್ಟು ನೀರು ಕುಡಿಯುವುದನ್ನು ತಪ್ಪಿಸುವುದು ಒಳ್ಳೆಯದಲ್ಲ.

ಪ್ರತಿ 8 ಅಥವಾ 10 ವಾರಗಳಿಗೊಮ್ಮೆ ಕೂದಲನ್ನು ಸಣ್ಣದಾಗಿ ಕಟ್ಟಿಂಗ್‌ ಮಾಡಿಸಿರುವುದರಿಂದ ಕೂದಲು ಉದುರುವಿಕೆ ತಡೆಯಲು ಸಾಧ್ಯ. ಇದರಿಂದ ಕೂದಲಿನ ಬೆಳವಣಿಗೆ ಕೊಂಚ ವೇಗ ಪಡೆದುಕೊಳ್ಳುತ್ತದೆ. ಉದ್ದ ಕೂದಲಿಗೆ ಬೇಗನೆ ನಾಶವಾಗುತ್ತದೆ, ತುಂಡಾಗುತ್ತದೆ. ಇದಕ್ಕಾಗಿ ಸಣ್ಣದಾಗಿ ಕಟ್ಟಿಂಗ್‌ ಮಾಡಿಸುವುದು ಹೆಚ್ಚು ಸೂಕ್ತ.

ಒತ್ತಡಯುಕ್ತ ಕೆಲಸ ಹಾಗೂ ಚಿಂತೆಯಿಂದಲೂ ಕೂದಲು ಉದುರುತ್ತವೆ. ಹೀಗಾಗಿ ನಿಗದಿತ ಸಮಯಕ್ಕೆ ಒಮ್ಮೆ ಚೆನ್ನಾಗಿ ಬಿಸಿ ತೈಲದ ಮಸಾಜ್‌ ಮಾಡಿಸಿಕೊಳ್ಳುವುದು ಒಳ್ಳೆಯದು.
ತಲೆ ಸ್ನಾನದ ಬಳಿಕ, ತಲೆಗೆ ಟವಲ್‌ ಸುತ್ತಿಕೊಳ್ಳುವುದು, ಕೂದಲನ್ನು ಟವಲ್‌ನಿಂದ ಮುಚ್ಚಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದನ್ನು ಮಾಡಲೇ ಬೇಡಿ. ಇದರಿಂದ ಕೂದಲುಗಳು ಇನ್ನಷ್ಟು ಉದುರುತ್ತವೆ.

ಉದ್ದ ಕೂದಲಿರುವವರು ನಿಯಮಿತವಾಗಿ ಮೇಲೆ ಕೆಳಗೆ ಫ್ಲಿಪ್‌ ಮಾಡುವುದರಿಂದ ಕೂದಲು ಬೆಳವಣಿಗೆಗೆ ಅನುಕೂಲವಾಗುತ್ತದೆ. ಕನಿಷ್ಟ 3 ನಿಮಿಷಗಳ ಕಾಲ ಮೇಲೆ ಕೆಳಗೆ ಕೂದಲನ್ನು ಫ್ಲಿಪ್‌ ಮಾಡಬಹುದು.ಚಿಂತೆ ಹೆಚ್ಚಾದರೆ ಕೇವಲ ಕೂದಲು ಮಾತ್ರವಲ್ಲದೆ ದೇಹದ ಆರೋಗ್ಯದಲ್ಲೂ ವ್ಯತ್ಯಯವಾಗುತ್ತದೆ. ಚಿಂತೆ, ಒತ್ತಡದ ಜೀವನದಿಂದ ಕೂದಲಿನ ಬೆಳವಣಿಗೆಗೆ ತುಂಬಾ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿಯೇ ಧ್ಯಾನ, ಯೋಗಾಸನ, ಪ್ರಾಣಾಯಾಮ ಸೇರಿ ಇನ್ನಿತರ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಸೂಕ್ತ. ಒತ್ತಡದಿಂದ ಮುಕ್ತವಾದರೆ ಕೂದಲ ಬೆಳವಣಿಗೆ ಸಲೀಸಾಗುತ್ತದೆ

- Advertisement -

Related news

error: Content is protected !!