Friday, May 17, 2024
spot_imgspot_img
spot_imgspot_img

ಹೆಸರು ಕಾಳನ್ನು ನಿತ್ಯ ತಿಂದು ನಿಮ್ಮ ಆರೋಗ್ಯದಲ್ಲಾಗುವ ಬದಲಾವಣೆ ನೋಡಿ

- Advertisement -G L Acharya panikkar
- Advertisement -

ಪಚ್ಚೆ ಹೆಸರು ಮತ್ತು ಹೆಸರು ಕಾಳು ಎಂದು ಕರೆಯಲ್ಪಡುವ ಹೆಸರು ಕಾಳು ಹೆಸರೇ ಹೇಳುವಂತೆ ಪಚ್ಚೆಯ ಹಸಿರು ಬಣ್ಣದಲ್ಲಿ ಚಿಕ್ಕದಾದ ಗಾತ್ರವನ್ನು ಹೊಂದಿರುತ್ತದೆ. ಇದು ಅತ್ಯಂತ ಚಿಕ್ಕ ಕಾಳಾದರೂ ಇದರಲ್ಲಿ ಇರುವ ಆರೋಗ್ಯದ ಗುಣವು ಅದ್ಭುತ ಸಂಗತಿಗಳಿಂದ ಕೂಡಿದೆ. ಗಣನೀಯವಾಗಿ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ದಲಾವಣೆ ಉಂಟಾಗುವುದು. ಜೊತೆಗೆ ಕೆಲವು ಆರೋಗ್ಯ ಸಮಸ್ಯೆ ಇದ್ದರೂ ಗುಣಮುಖವಾಗುವುದು ಎಂದು ವೈಜ್ಞಾನಿಕ ಶಾಸ್ತ್ರ ತಿಳಿಸುತ್ತದೆ.

ಹೆಸರು ಕಾಳಿನಲ್ಲಿ ಫೋಲೇಟ್, ವಿಟಮಿನ್ ಬಿ9 ಸಮೃದ್ಧವಾಗಿವೆ. ಇವು ದೇಹದಲ್ಲಿ ಹೊಸ ರಕ್ತಕಣಗಳ ಸೃಷ್ಟಿಗೆ ಸಹಾಯ ಮಾಡುತ್ತವೆ. ಅದರಲ್ಲೂ ಕೆಂಪು ರಕ್ತ ಕಣಗಳನ್ನು ಹೆಚ್ಚುವಂತೆ ಮಾಡುವುದು. ಹಾಗಾಗಿ ಗರ್ಭಿಣಿಯರಿಗೆ ಅತ್ಯುತ್ತಮವಾದದ್ದು.ಆರೋಗ್ಯಕರ ರಕ್ತಕಣಗಳಿಂದಾಗಿ ಮಗುವಿನ ಬೆಳವಣಿಗೆಯು ಉತ್ತಮವಾಗುವುದು. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು.

ಹೆಸರು ಕಾಳಿನಲ್ಲಿ ಫ್ಲೋವೊನೈಡ್ ಆಂಟಿ ಆಕ್ಸಿಡೆಂಟ್ ಅಧಿಕವಾಗಿದೆ. ಇದು ಸ್ವತಂತ್ರ ರಾಡಿಕಲ್ಸನಿಂದ ಉಂಟಾದ ಹಾನಿಯನ್ನು ಸುಲಭವಾಗಿ ತಡೆಯುವುದು. ಜೊತೆಗೆ ಸ್ವತಂತ್ರ ರಾಡಿಕಲ್ಸಗಳನ್ನು ನಿಯಂತ್ರಣದಲ್ಲಿ ಇಡುವುದು. ರಕ್ತವು ಆರೋಗ್ಯಕರ ಸ್ಥಿರತೆಯನ್ನು ಕಾಯ್ದುಕೊಂಡು, ದೇಹದಲ್ಲಿ ಉತ್ತಮ ಸಂಚಾರವನ್ನು ಒಳಗೊಳ್ಳುವಂತೆ ಮಾಡುವುದು. ಇದರಲ್ಲಿ ಇರುವ ವಿಟಮಿನ್ ಬಿ ಗುಣವು ಸಾಮಾನ್ಯ ಹೃದಯ ಬಡಿತದಿಂದ ಕೂಡಿರುವಂತೆ ಮಾಡುವುದು. ಇದರಲ್ಲಿ ಇರುವ ಮ್ಯಾಗ್ನಿಸಿಯಮ್ ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಅಡೆತಡೆಯನ್ನು ನಿವಾರಿಸುವುದು. ಅನಾರೋಗ್ಯಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್‍ಗಳನ್ನು ತಡೆಯಲು ಸಹಾಯ ಮಾಡುವುದು.

ಒಂದು ಕಪ್ ಹೆಸರುಕಾಳಿನಲ್ಲಿ ಶೇ 28ರಷ್ಟು ಪ್ರೋಟಿನ್‍ಗಳಿರುತ್ತವೆ. ದೇಹದಲ್ಲಿ ಪ್ರೋಟೀನ್‍ಗಳ ಕೊರತೆ ಉಂಟಾದಾಗ ಸಾಕಷ್ಟು ಅನಾರೋಗ್ಯಗಳು ಕಾಣಿಸಿಕೊಳ್ಳುತವೆ. ನಿತ್ಯದ ಆಹಾರದಲ್ಲಿ ಹೆಸರು ಕಾಳನ್ನು ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತಕಣಗಳ ಉತ್ಪತ್ತಿ ಮತ್ತು ಮೂಳೆಗಳು ಬಲಗೊಳ್ಳುವುದು. ಜೊತೆಗೆ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅದಕ್ಕಾಗಿ ನೀವು ಮೊಳಕೆ ಬರಿಸಿದ ಹೆಸರುಕಾಳನ್ನು ಸಲಡ್‍ಗಳ ರೀತಿಯಲ್ಲಿ ಸೇವಿಸುವುದು, ಅಥವಾ ಮೊಳಕೆ ಬರಿಸಿದ ಕಾಳುಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು.

- Advertisement -

Related news

error: Content is protected !!