Saturday, June 29, 2024
spot_imgspot_img
spot_imgspot_img

ಚುನಾವಣಾ ಆಯೋಗ ಇಂದು ಮಧ್ಯಾಹ್ನ ದೆಹಲಿಯಲ್ಲಿ ಸುದ್ದಿಗೋಷ್ಠಿ

- Advertisement -G L Acharya panikkar
- Advertisement -

ಚುನಾವಣಾ ಆಯೋಗ ಇಂದು ಮಧ್ಯಾಹ್ನ 12.30ಕ್ಕೆ  ದೆಹಲಿಯಲ್ಲಿ ಸುದ್ದಿಗೋಷ್ಟಿ ಹಮ್ಮಿಕೊಂಡಿದೆ. ಈ ವೇಳೆ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಲಿದೆ. ವಿಶ್ವದಾದ್ಯಂತ ಕೊರೊನಾ ಸಾಂಕ್ರಾಮಿಕ ಹರಡಿರೋ ನಡುವೆ ನಡೆಯುತ್ತಿರುವ ಮೊದಲ ಪ್ರಮುಖ ರಾಜ್ಯ ಚುನಾವಣೆ ಇದಾಗಿದೆ.

ಬಿಹಾರ ವಿಧಾನಸಭೆಗೆ ನವೆಂಬರ್​ 29ರೊಳಗಾಗಿ 243 ಹೊಸ ಸದಸ್ಯರನ್ನ ಆಯ್ಕೆ ಮಾಡಬೇಕಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿರುವ ಕಾರಣ ಒಂದಕ್ಕಿಂತ ಹೆಚ್ಚಿನ ಹಂತಗಳಲ್ಲಿ ಚುನಾವಣೆ ನಡೆಯುವ ಸಂಭವವಿದೆ.

ಸಿಎಂ ನಿತೀಶ್​ ಕುಮಾರ್​ 4ನೇ ಅವಧಿಗೆ ಚುನಾವಣೆ ಎದುರಿಸಲಿದ್ದಾರೆ. ಜೈಲು ಸೇರಿರುವ ಲಾಲೂ ಪ್ರಸಾದ್​ ಯಾದವ್​ ನೇತೃತ್ವದ ಆರ್​ಜೆಡಿ ಪಕ್ಷ ಹಾಗೂ ಕಾಂಗ್ರೆಸ್​​, ನಿತೀಶ್ ವಿರುದ್ಧ ಚುನಾವಣೆಯಲ್ಲಿ ಸೆಣೆಸಲಿವೆ.

- Advertisement -

Related news

error: Content is protected !!