Tuesday, July 1, 2025
spot_imgspot_img
spot_imgspot_img

ಅಮೆರಿಕದಲ್ಲಿ ಹೊಸ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಎಲಾನ್ ಮಸ್ಕ್

- Advertisement -
- Advertisement -

ವಾಷಿಂಗ್ಟನ್: ಅಮೆರಿಕದಲ್ಲಿ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ಗೆ ಅನುಮೋದನೆ ಸಿಕ್ಕರೆ ಮರುದಿನವೇ ಹೊಸ ಪಕ್ಷವನ್ನು ಕಟ್ಟುವುದಾಗಿ ಎಲಾನ್ ಮಸ್ಕ್ ಟ್ರಂಪ್​ಗೆ ಎಚ್ಚರಿಕೆ ನೀಡಿದ್ದಾರೆ.

ಒಂದು ಕಾಲದಲ್ಲಿ ಡೊನಾಲ್ಡ್​ ಟ್ರಂಪ್ ಆಪ್ತಮಿತ್ರ ಮತ್ತು ಸಲಹೆಗಾರರಾಗಿದ್ದ ​ ಬಿಲಿಯನೇರ್ ಎಲಾನ್ ಮಸ್ಕ್​ , ಟ್ರಂಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಮಸೂದೆ ತೆರಿಗೆದಾರರ ಮೇಲೆ ಭಾರಿ ಹೊರೆಯಾಗಲಿದೆ ಎಂದು ಮಸ್ಕ್​ ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಈ ಬಿಲ್​ಗೆ ಅನುಮೋದನೆ ಸಿಕ್ಕರೆ ಜನರ ಹಿತಾಸಕ್ತಿಗಳಿಗೆ ನಿಜವಾಗಿಯೂ ಆದ್ಯತೆ ನೀಡುವ ಹೊಸ ಪಕ್ಷವನ್ನು ರಚಿಸುವುದಾಗಿ ಹೇಳಿದ್ದಾರೆ.

ಈ ಮಸೂದೆಯನ್ನು ಬೆಂಬಲಿಸುವ ಸಂಸದರು ಮುಂದಿನ ವರ್ಷ ಪ್ರಾಥಮಿಕ ಚುನಾವಣೆಯಲ್ಲಿ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಮಸ್ಕ್ ಸ್ಪಷ್ಟವಾಗಿ ಹೇಳಿದ್ದಾರೆ. ಶನಿವಾರ ಸೆನೆಟ್​ನಲ್ಲಿ ಮಸೂದೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಮಸ್ಕ್​ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವುದಾಗಿ ಭರವಸೆ ನೀಡಿ ಈ ಮಸೂದೆಯನ್ನು ಬೆಂಬಲಿಸಿದ ಶಾಸಕರು ನಾಚಿಕೆಪಡಬೇಕು ಎಂದಿದ್ದಾರೆ.

ಮಸೂದೆಯನ್ನು ದುಬಾರಿ ಎಂದು ಕರೆದಿರುವ ಮಸ್ಕ್​​, ಇದನ್ನು ಪೋರ್ಕಿ ಪಿಗ್ ಪಾರ್ಟಿ ಎಂದಿದ್ದಾರೆ ಈ ಪದವನ್ನು ವ್ಯರ್ಥ ವೆಚ್ಚಕ್ಕೆ ಬಳಸಲಾಗುತ್ತದೆ. ಈ ಮಸೂದೆಯು ರಾಷ್ಟ್ರೀಯ ಸಾಲವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು DOGE ಮೂಲಕ ಮಾಡಿರುವ ಎಲ್ಲಾ ಉಳಿತಾಯವನ್ನು ಹಾಳು ಮಾಡುತ್ತದೆ ಎಂದು ಮಸ್ಕ್​ ಹೇಳಿದ್ದಾರೆ.

- Advertisement -

Related news

error: Content is protected !!