- Advertisement -
- Advertisement -






ಬೆಂಗಳೂರು: ಹಾಡಹಗಲೇ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕಬ್ಬನ್ ಪೇಟೆ ಬಳಿ ನಡೆದಿದೆ.
ಜುನೈದ್ ಮೃತಪಟ್ಟ ಮೊಬೈಲ್ ಕಳ್ಳ. ಜೂನ್. 15 ರಂದು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಪಾದಚಾರಿಯ ಮೊಬೈಲ್ ಕಸಿದು ಇಬ್ಬರು ಕಳ್ಳರು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಕಾರ್ಮಿಕನ ಸಮಯ ಪ್ರಜ್ಞೆಯಿಂದ ಕಳ್ಳತನ ವಿಫಲವಾಗಿದೆ.
ಮೊಬೈಲ್ ಕಸಿದು ಬೈಕ್‌ನಲ್ಲಿ ಎಸ್ಕೇಪ್ ಆಗುತ್ತಿದ್ದ ವೇಳೆ ಅವರ ಮೇಲೆ ಕಾರ್ಮಿಕ ಮೂಟೆ ಎಸೆದಿದ್ದಾನೆ. ಇದರಿಂದ ಬೈಕ್‌ನಿಂದ ಕೆಳಗೆ ಬಿದ್ದ ಜುನೈದ್, ಅಲ್ಲಿಂದ ತಪ್ಪಿಸಿಕೊಂಡು ಸ್ವಲ್ಪ ದೂರ ಓಡಿ ಹೋಗಿದ್ದಾನೆ.
ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಜುನೈದ್, ಫುಟ್‌ಪಾತ್ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮತ್ತೋರ್ವ ಆರೋಪಿ ಅರ್ಬಾಜ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂಬುದಾಗಿ ತಿಳಿದುಬಂದಿದೆ.
- Advertisement -








