Monday, April 29, 2024
spot_imgspot_img
spot_imgspot_img

ಪುತ್ತಿಲ ಪರಿವಾರದ ಇವತ್ತು ಹುಟ್ಟಿದ ಮಗು ಕೂಡ ಬಿಜೆಪಿ ಜೊತೆ ಇನ್ಮುಂದೆ ಸಂಧಾನ ಪ್ರಕ್ರಿಯೆಗೆ ಹೋಗುವುದಿಲ್ಲ- ರಾಜಾರಾಮ್ ಭಟ್

- Advertisement -G L Acharya panikkar
- Advertisement -

ಪುತ್ತಿಲ ಪರಿವಾರದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಮಾಲೋಚನೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಪುತ್ತಿಲ ಪರಿವಾರ ಈಗಾಗಲೇ ಚುನಾವಣಾ ರಾಜಕೀಯಕ್ಕೆ ಇಳಿದಿದ್ದು, ಕಳೆದ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಮಾತೃಪಕ್ಷ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಅಸಮಾಧಾನ ಸಮಾಜದಲ್ಲಿ ಹೊಗೆಯಾಡುತ್ತಿದ್ದದನ್ನು ಮನಗಂಡು ಪುತ್ತಿಲ ಪರಿವಾರದಿಂದ ಅರುಣ್‌ ಕುಮಾರ್‌ ಪುತ್ತಿಲರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಇಳಿಬೇಕಾಯಿತು.

ಮೋದಿಯ ವಿರುದ್ಧ ಸ್ಪರ್ಧೆ ಎನ್ನುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ, ಪುತ್ತಿಲ ಪರಿವಾರದ ಕಾರ್ಯಕರ್ತರು ಪಾಕಿಸ್ತಾನ ,ಮಂಗಳಗ್ರಹದಿಂದ ಬಂದವರಲ್ಲ, ಇವರೆಲ್ಲರೂ ಮೊದಲು ಮಾತೃಪಕ್ಷ ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡಿದವರು. ಕಾರ್ಯಕರ್ತರ ಭಾವನೆಗೆ ಮಾತೃಪಕ್ಷ ಯಾವಾಗ ಅನ್ಯಾಯ ಮಾಡಿತ್ತೋ ಆಗ ಅವರು ಪುತ್ತಿಲ ಪರಿವಾರದೊಂದಿಗೆ ಕೈ ಜೋಡಿಸಿದ್ದಾರೆ.

ಕಾರ್ಯಕರ್ತರು ಇದ್ದರೆ ನಾಯಕರು ಇರುತ್ತಾರೆ, ಕಾರ್ಯಕರ್ತರು ಇದ್ದರೆ ಸಂಘಟನೆಯು ಉಂಟು ಎಂದರು. ಮಾತೃಪಕ್ಷದ ಜೊತೆ ವಿಲೀನವಾಗಲು ನಮ್ಮಿಂದ ಈಗಲೂ ಯಾವುದೇ ಆಕ್ಷೇಪವಿಲ್ಲ ಆದರೆ ಇನ್ನು ಮುಂದೆ ಪುತ್ತಿಲ ಪರಿವಾರದ ಇವತ್ತು ಹುಟ್ಟಿದ ಮಗು ಕೂಡ ಬಿಜೆಪಿ ಜೊತೆ ಇನ್ಮುಂದೆ ಸಂಧಾನ ಪ್ರಕ್ರಿಯೆಗೆ ಹೋಗುವುದಿಲ್ಲ. ಅವರಾಗಿ ಬಂದರೆ ಮತ್ತೆ ಆಲೋಚನೆ ಮಾಡೋಣ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸಹಿತ ಎಲ್ಲಾ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧಿಸಲಿದೆ ಹಾಗೂ ಅರುಣ್‌ ಕುಮಾರ್‌ ರಂತಹ ನಾಯಕರು ಇನ್ನೂ ಕೂಡ ಪುತ್ತಿಲ ಪರಿವಾರದಲ್ಲಿ ಇದ್ಧಾರೆ ಅವರನ್ನು ನಾವು ಕಣಕ್ಕೆ ಇಳಿಸುತ್ತೇವೆ ಎಂದು ಪುತ್ತಿಲ ಪರಿವಾರದ ಮುಖಂಡ ರಾಜಾರಾಮ್ ಭಟ್ ಮಾಧ್ಯಮದವರೊಂದಿಗೆ ಹೇಳಿದರು

- Advertisement -

Related news

error: Content is protected !!