Friday, July 24, 2026
spot_imgspot_img
spot_imgspot_img

ಸಿಬಿಎಸ್‌ಇ10,12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

- Advertisement -
- Advertisement -

ಹೊಸದಿಲ್ಲಿ : ಸಿಬಿಎಸ್‌ಇ ಶಿಕ್ಷಣ ಮಂಡಳಿ 2025ನೇ ಸಾಲಿನ 10 ಮತ್ತು 12ನೇ ತರಗತಿ ಅಂತಿಮ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಸಿದೆ. ಆ ಪ್ರಕಾರ 10ನೇ ತರಗತಿ ಪರೀಕ್ಷೆ ಫೆಬ್ರವರಿ 15ರಿಂದ ಶುರುವಾಗಿ ಮಾರ್ಚ್ 18ರ ವರೆಗೆ ನಡೆಯಲಿದೆ.

12ನೇ ತರಗತಿ ಪರೀಕ್ಷೆಗಳು ಫೆಬ್ರವರಿ 17ರಿಂದ ಶುರುವಾಗಿ ಏಪ್ರಿಲ್ 4ರ ತನಕ ನಡೆಯಲಿವೆ.10ನೇ ತರಗತಿಗೆ ಫೆ.15ರಂದು ಮೊದಲ ಪರೀಕ್ಷೆ ಇಂಗ್ಲಿಷ್ ಆಗಿರುತ್ತದೆ. ಅಂತೆಯೇ 12ನೇ ತರಗತಿಯ ಮೊದಲ ಪರೀಕ್ಷೆ ಫೆ.17ರಂದು ಫಿಸಿಕಲ್ ಎಜುಕೇಶನ್‌ನಿಂದ ಶುರುವಾಗಲಿದೆ.cbse.govt.in ವೈಬ್ ಸೈಟ್ ನಲ್ಲಿ ವಿವರವಾದ ವೇಳಾಪಟ್ಟಿಯನ್ನು ಪಿಡಿಎಫ್ ಫಾರ್ಮಾಟ್‌ನಲ್ಲಿ ಹಾಕಲಾಗಿದೆ.

ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಹೋಗಿ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.cbseacademic.nic.in. ವೆಬ್‌ಸೈಟ್‌ನಲ್ಲಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮಾದರಿ ಪ್ರಶ್ನೆಪತ್ರಿಕೆ, ಪರೀಕ್ಷೆಯ ಸ್ವರೂಪ, ಅಂಕಗಳನ್ನು ನೀಡುವ ವಿವರ ಇತ್ಯಾದಿ ಮಾಹಿತಿಗಳನ್ನು ನೀಡಲಾಗಿದ್ದು, ಮಕ್ಕಳಿಗೆ ಪರೀಕ್ಷೆಗೆ ತಯಾರಿ ನಡೆಸಲು ನೆರವಾಗಲಿದೆ.

- Advertisement -

Related news

error: Content is protected !!