- Advertisement -
- Advertisement -


ಕಾರ್ಕಳ : ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಲಾಗಿರುವ ಪರುಶುರಾಮ ಥೀಮ್ ಪಾರ್ಕ್ ನಲ್ಲಿರುವ ಪರುಶುರಾಮ ಮೂರ್ತಿ ತಯಾರಕರ ವಿರುದ್ದ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಚಿನ ಪರಶುರಾಮ ಮೂರ್ತಿ ಮಾಡಿ ಕೊಡಲು ₹1.25 ಕೋಟಿ ಪಡೆದು, ನಕಲಿ ಮೂರ್ತಿಯನ್ನು ಮಾಡಿ ಕೊಟ್ಟು ಮೋಸ ಮಾಡಿದ್ದಾರೆ ಎಂಬ ಆರೋಪದಲ್ಲಿ ಕೃಷ್ಣ ಆರ್ಟ್ ವರ್ಲ್ಡ್‌ನ ಕೃಷ್ಣ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದುಕೊಂಡು ಕಾಮಗಾರಿ ನಡೆಸುತ್ತಿರುವ ಕೃಷ್ಣ ಅವರು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ನಲ್ಲೂರು ಗ್ರಾಮದ ಕೃಷ್ಣ ಎನ್ನುವವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
- Advertisement -