Tuesday, August 11, 2026
spot_imgspot_img
spot_imgspot_img

ರಾತ್ರೋರಾತ್ರಿ ಕಂಡಕ್ಟರ್ ಜೊತೆ ಎಸ್ಕೇಪ್ ಆದ ಖ್ಯಾತ ಯೂಟ್ಯೂಬರ್ ಪತ್ನಿ!

- Advertisement -
- Advertisement -

ಪ್ರೀತಿಸಿ ಮದುವೆಯಾಗಿದ್ದ ಜೋಡಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಆಲಪ್ಪುಳ: ಖ್ಯಾತ ಮಲಯಾಳಂ ಯೂಟ್ಯೂಬರ್ ಹಾಗೂ ನಟ ಅಖಿಲ್ ಎನ್‌ಆರ್‌ಡಿ ಅವರ ಪತ್ನಿ ಮೇಘಾ ರಾತ್ರೋರಾತ್ರಿ ಮನೆಬಿಟ್ಟು ಹೋಗಿದ್ದಾರೆ ಎನ್ನುವ ಸುದ್ದಿ ಮಲಯಾಳಂ ಸೋಶಿಯಲ್ ಮೀಡಿಯಾ ವಲಯದಲ್ಲಿ ಭಾರೀ ವೈರಲ್ ಆಗಿದೆ.

ಸದ್ಯ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಮೇಘಾ ಬಸ್ ಕಂಡಕ್ಟರ್ ಜತೆ ಓಡಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಸುದ್ದಿ ಹರಿದಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಖಿಲ್ ಅವರ ಸ್ನೇಹಿತ ಸಾಯಿ ಕೃಷ್ಣ ಅವರು ಮೇಘ ಅವರನ್ನು ಗುರಿಯಾಗಿಸಿಕೊಂಡು ನಿಂದಿಸದಂತೆ ಅಥವಾ ವಿನಾಕಾರಣ ವಿಡಿಯೋ/ಪೋಸ್ಟ್ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ಮೇಘಾ ಕಾಣೆಯಾಗಿದ್ದಾರೆ ಎಂದು ಅಖಿಲ್ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿದ್ದರು. ತದನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮೇಘಾ ಬ್ಯಾಗ್‌ನೊಂದಿಗೆ ಮತ್ತೊಬ್ಬ ವ್ಯಕ್ತಿಯ ಜೊತೆ ಹೋಗುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

ನೌಕಾಪಡೆಯ ಉದ್ಯೋಗವನ್ನು ತೊರೆದು ಕಂಟೆಂಟ್ ಕ್ರಿಯೇಟರ್ ಆಗಿ ಸಕ್ರಿಯರಾಗಿರುವ ಅಖಿಲ್ ಅವರ ಮದುವೆ ಎರಡು ವರ್ಷಗಳ ಹಿಂದೆ ನಡೆದಿತ್ತು. ಪ್ರಸ್ತುತ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಚರ್ಚೆಗಳು ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ದಂಪತಿಯ ವೈಯಕ್ತಿಕ ಜೀವನದ ಬಗ್ಗೆ ವಿವಿಧ ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ. ಮೇಘಾ ಅವರ ಸೋಷಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಕಂಡುಬಂದ ಕೆಲವು ಬದಲಾವಣೆಗಳನ್ನು ಗಮನಿಸಿರುವ ನೆಟ್ಟಿಗರು, ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಚರ್ಚೆ ಮಾಡುತ್ತಿದ್ದಾರೆ.

- Advertisement -

Related news

error: Content is protected !!