Tuesday, July 1, 2025
spot_imgspot_img
spot_imgspot_img

ಮಹಿಳಾ ಪೊಲೀಸ್ ಪೇದೆಯ ಮೇಲೆ ಪೊಲೀಸ್ ಅಧಿಕಾರಿ ಮಾವನಿಂದ ಅತ್ಯಾಚಾರ; ಟ್ರಿಪಲ್ ತಲಾಖ್ ಕೊಟ್ಟ ಗಂಡ

- Advertisement -
- Advertisement -

ಮೀರತ್​ : ಉತ್ತರಪ್ರದೇಶದ ಮೀರತ್​ನಲ್ಲಿ ಕೆಲಸ ಮಾಡುವ ಮಹಿಳಾ ಪೊಲೀಸ್​ ಪೇದೆಯೊಬ್ಬರು ಪೊಲೀಸ್​ ಅಧಿಕಾರಿಯಾದ ಮಾವನಿಂದ ರೇಪ್​ಗೊಳಗಾಗಿರುವುದು ಬೆಳಕಿಗೆ ಬಂದಿದೆ. ಇಷ್ಟು ಸಾಲದೆಂಬಂತೆ, ಈ ಸಂಗತಿ ತಿಳಿದ ಆಕೆಯ ಪೊಲೀಸ್​ ಗಂಡ, ಕಾನೂನು ಬಾಹಿರವಾದ ಟ್ರಿಪಲ್ ತಲಾಖ್​ ಹೇಳಿ ಆಕೆಗೆ ವಿಚ್ಛೇದನ ನೀಡಿದ್ದಾನೆ ಎನ್ನಲಾಗಿದೆ!

ಕಳೆದ ಬುಧವಾರ ರಾತ್ರಿ ಸಂತ್ರಸ್ತ ಮಹಿಳಾ ಪೇದೆಯು ಮನೆಯಲ್ಲಿ ಒಬ್ಬಳೇ ಇದ್ದಾಗ ಪ್ರಾವಿಂಷಿಯಲ್ ಆರ್ಮ್ಸ್​ ಕಾನ್ಸಟಬುಲರಿಯ ಅಧಿಕಾರಿ ಮಾವ ನಜೀರ್​ ಅಹಮದ್​ ಬಂದು ಅತ್ಯಾಚಾರ ಎಸಗಿದ. ಈ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಸಾಯಿಸಿಬಿಡುವುದಾಗಿ ಬೆದರಿಕೆ ಹಾಕಿದ ಎನ್ನಲಾಗಿದೆ.

ತನ್ನ ಮೇಲೆ ನಡೆದ ಅತ್ಯಾಚಾರದ ವಿಷಯವನ್ನು ಪೊಲೀಸ್​ ಅಧಿಕಾರಿಯಾದ ತನ್ನ ಪತಿ ಅಬೀದ್​ಗೆ ಆಕೆ ಹೇಳಿಕೊಂಡಿದ್ದಾಳೆ. ಆದರೆ, ಅವಳಿಗೆ ಸಹಾಯ ಮಾಡುವ ಬದಲು, ಆತ ತಕ್ಷಣ ನಿಷೇಧಿತ ಟ್ರಿಪಲ್​ ತಲಾಖ್​ ಪದ್ಧತಿಯ ಮೂಲಕ ವಿಚ್ಛೇದನ ನೀಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಸಂತ್ರಸ್ತ ಪೇದೆಯು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ಮೂರು ವರ್ಷ ಮುಂಚೆ ಮದುವೆಯಾದಾಗಿನಿಂದ ತನ್ನ ಅತ್ತೆಮಾವ ವರದಕ್ಷಿಣೆಗಾಗಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಕೂಡ ಹೇಳಿಕೊಂಡಿದ್ದಾಳೆ. ಘಾಜಿಯಾಬಾದ್​ನಲ್ಲಿ ನಿಯುಕ್ತಿ ಹೊಂದಿರುವ ಮುಖ್ಯ ಆರೋಪಿ ನಜೀರ್​ ಅಹ್ಮದ್​ ಮತ್ತು ಮೀರತ್​ನ ಪೊಲೀಸ್​ ಲೈನ್ಸ್​ನಲ್ಲಿ ಕೆಲಸ ಮಾಡುವ ಆತನ ಮಗ ಅಬೀದ್​ ವಿರುದ್ಧ ಕೊತ್ವಾಲಿ ಠಾಣೆ​ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ಮೀರತ್​ ನಗರ ಎಸ್ಪಿ ವಿನೀತ್​ ಭಟ್ನಾಗರ್​ ತಿಳಿಸಿದ್ದಾರೆ.

- Advertisement -

Related news

error: Content is protected !!