Sunday, October 6, 2024
spot_imgspot_img
spot_imgspot_img

ಪುತ್ತೂರು ತಿರುಮಲ ಹೋಂಡಾ ಶೋರೂಂ ಮಾಲಕರ ಅಟ್ಟಹಾಸ : ಸಾಲ ಮರುಪಾವತಿ ನೋಟಿಸ್‌ ಕೊಡಲು ಹೋದ SBI ನೌಕರನನ್ನು ಪಿಸ್ತೂಲ್‌ ತೋರಿಸಿ ದಿಗ್ಬಂಧನ : ಶಸ್ತ್ರಾಸ್ತ್ರ ಕಾಯ್ದೆಯಡಿ ಅಪ್ಪ ಮಗನ ಮೇಲೆ FIR ದಾಖಲು

- Advertisement -
- Advertisement -

ಪುತ್ತೂರು : ಪುತ್ತೂರಿನ ತಿರುಮಲ ಹೊಂಡಾ ಮಾಲಕರ 2 ಕೋಟಿ ಸಾಲ ಬಾಕಿಯಾಗಿದ್ದು ಮರುಪಾವತಿಗಾಗಿ ಮನೆಗೆ ಹೋದ SBI ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ. ಘಟನೆ ನಡೆದಿದ್ದು. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌, ಕೋರ್ಟ್‌ ರಸ್ತೆ, ಪುತ್ತೂರು ಇಲ್ಲಿ ರಿಲೇಶನ್ ಶಿಪ್‌ ಮ್ಯಾನೇಜರ್‌ ಕರ್ತವ್ಯ ನಿರ್ವಹಿಸುತ್ತಿರುವ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿಯಾದ ಚೈತನ್ಯ ಹೆಚ್.ಸಿ (40)ರವರ ದೂರಿನಂತೆ ಸದ್ರಿ ಬ್ಯಾಂಕ್‌ ನಲ್ಲಿ ಪುತ್ತೂರು ತಾಲೂಕು, ಬಲ್ನಾಡು ಗ್ರಾಮದ ಉಜಿರ್‌ಪಾದೆ ನಿವಾಸಿ ಕೀರ್ತಿ ಅಖಿಲೇಶ್‌ ಎಂಬವರು ರೂ 2 ಕೋಟಿ ಸಾಲ ಮಾಡಿದ್ದು, ಸದ್ರಿ ಸಾಲ ಮರುಪಾವತಿ ಮಾಡದೇ NPA ಆಗಿದ್ದು, ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್‌ ನೋಟೀಸ್‌ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರಲಿಲ್ಲ.

ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ, ದಿನಾಂಕ 25.09.2024 ರಂದು ಮಧ್ಯಾಹ್ನ, ಚೈತನ್ಯ ಹೆಚ್.ಸಿ ಯವರು ಸಹೋದ್ಯೋಗಿಗಳಾದ ಆಕಾಶ್‌ ಚಂದ್ರಬಾಬು ಮತ್ತು ದಿವ್ಯಶ್ರೀಯವರೊಂದಿಗೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಉಜಿರ್‌ಪಾದೆಯಲ್ಲಿರುವ ಕೀರ್ತಿ ಅಖಿಲೇಶ್‌ ರವರ ಮನೆಗೆ ಹೋದಾಗ ಮನೆಯಲ್ಲಿದ್ದ ಅರುಣ್‌ ಕಿಶೋರ್‌ ರವರು ಬ್ಯಾಂಕ್‌ ಸಿಬ್ಬಂದಿಗಳನ್ನು ಮನೆ ಒಳಗೆ ಬರಮಾಡಿಕೊಂಡಿದ್ದಾರೆ.

ಬಳಿಕ ಅಖಿಲೇಶ್‌ ರವರಿಗೆ ಕರೆ ಮಾಡಿ ವಿಚಾರ ತಿಳಿಸಿರುದ್ದು, ಅಖಿಲೇಶ್‌ ರವರು ಮನೆಗೆ ಬಂದು ಬ್ಯಾಂಕ್‌ ಸಿಬ್ಬಂದಿಗಳಾದ ಚೈತನ್ಯ ಹೆಚ್.ಸಿ , ಆಕಾಶ್‌ ಚಂದ್ರಬಾಬು ಮತ್ತು ದಿವ್ಯಶ್ರೀಯವರಿಗೆ ಮನೆಗೆ ಬಂದ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿದ್ದಾರೆ. ಬಳಿಕ ಕೃಷ್ಣ ಕಿಶೋರ್‌ ರವರು ಕೂಡಾ ಮನೆಗೆ ಬಂದು ಬ್ಯಾಂಕ್‌ ಸಿಬ್ಬಂದಿಗಳಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್‌ ತೋರಿಸಿ ಶೂಟ್‌ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ , ಈ ಬಗ್ಗೆ ದಿನಾಂಕ 26.09.2024 ರಂದು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ,ಕ್ರ 109/2024, ಕಲಂ:- ‌ 132, 127(2),351(2),r/w 3(5)ಬಿ.ಎನ್.ಎಸ್ ಮತ್ತು ಕಲಂ 27 ARMS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇನ್ನು ತಿರುಮಲ ಹೋಂಡಾ ಶೋರೂಂ ಮಾಲಕರು ಈ ಹಿಂದೆ ಅನೇಕ ಗ್ರಾಹಕರಿಗೆ ದಬ್ಬಾಳಿಕೆ ನಡೆಸಿದ್ದಾರೆ ಎಂಬ ಮಾಹಿತಿ ಕೂಡ ಸಾರ್ವಜನಿಕರಿಂದ ತಿಳಿದುಬಂದಿದೆ

- Advertisement -

Related news

error: Content is protected !!