Sunday, September 6, 2026
spot_imgspot_img
spot_imgspot_img

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: 6 ಪ್ರತ್ಯೇಕ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಬರಹಗಳ ಬಗ್ಗೆ ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್ ಠಾಣೆಗಳಲ್ಲಿ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಹುಬ್ಬಳ್ಳಿ ನಿವಾಸಿ ಅಜಿತ್ ನಾಗಪ್ಪ ಬಸಾಪುರ್ ಎಂಬವರು ದೂರು ನೀಡಿದ್ದು ಕುಡ್ಲ ರಾಂ ಪೇಜ್‌ಗೆ ನೀಡಿದ ಸಂದರ್ಶನದಲ್ಲಿ ಜೈನರ ಬಗ್ಗೆ ತುಚ್ಚವಾಗಿ ಮಾತನಾಡಿರುವುದಾಗಿ ಗಿರೀಶ್ ಮಟ್ಟಣ್ಣನವ‌ರ್ ಹಾಗೂ ಕುಡ್ಲ ರಾಂಪೇಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಅದೇರೀತಿ ಬೆಳ್ತಂಗಡಿ ನಿವಾಸಿ ವಿಜಯ ಎಂಬವರ ದೂರಿನಂತೆ ‘ವಿಕಾಸ್ ವಿಕ್ಕಿ ಹಿಂದೂ’ ಎಂಬ ಫೇಸ್‌ಬುಕ್ ಪೇಜ್ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಧನಂಜಯ ಜೈನ್ ಎಂಬವರ ದೂರಿನಂತೆ “ಏನ್ರಿ ಗೌಡ್ರೆ” ಎಂಬ ಫೇಸ್ ಬುಕ್ ಪೇಜ್ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪ್ರಭಾಕರ ಗೌಡ ಎಂಬವರ ದೂರಿನಂತೆ ಲಾಯರ್ ಜಗದೀಶ್ ಎಂಬಾತ ಸಾರ್ವಜನಿಕರಿಗೆ ದುಷ್ಟೇರಣೆ ಉಂಟು ಮಾಡುವ ಸಂದೇಶ ನೀಡಿದ್ದಲ್ಲದೆ ಅಪರಾಧ ಎಸಗಲು ಪ್ರೇರಣೆ ನೀಡಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಭಾಕರ ಗೌಡ ಎಂಬವರ ದೂರಿನಂತೆ ಲೋಕೇಶ್ ಪೂಜಾರಿ ವಿರುದ್ಧ ಸಮುದಾಯಗಳ ನಡುವೆ ವೈಮನಸ್ಯ ಉಂಟಾಗುವಂತಹ ಪೋಸ್ಟ್ ಹಾಕಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಲಾಗಿದೆ.ಬೆಳ್ತಂಗಡಿ ನಿವಾಸಿ ಉದಯ ಪೂಜಾರಿ ಎಂಬವರ ದೂರಿನಂತೆ ನವೀನ್ ಜೈನ್ ಎಂಬಾತನ ವಿರುದ್ಧ ಯೂಟ್ಯೂಬ್‌ನಲ್ಲಿ ಅಪರಾಧ ನಡೆಸಲು ಪ್ರೇರಣೆಯಾಗುವ ಸಂದೇಶಗಳನ್ನು ಹಂಚಿರುವುದಾಗಿ ಆರೋಪಿಸಿ ದೂರು ನೀಡಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!