Thursday, July 10, 2025
spot_imgspot_img
spot_imgspot_img

ಸುಳ್ಯ: ಅರಂತೋಡು ಗ್ರಾ.ಪಂ. ಘನತ್ಯಾಜ್ಯ ಘಟಕಕ್ಕೆ ಬೆಂಕಿ

- Advertisement -
- Advertisement -

ಸುಳ್ಯ: ಅರಂತೋಡು ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಘಟಕ ಹೊತ್ತಿ ಉರಿದಿದೆ.ಬುಧವಾರ ಸಂಜೆ ಘಟನೆ ನಡೆದಿದ್ದು ಘಟಕದಲ್ಲಿ ಪೂರ್ತಿಯಾಗಿ ತ್ಯಾಜ್ಯ ಬೇರ್ಪಡಿಸಿ ತುಂಬಿಡಲಾಗಿದ್ದು ಬೆಂಕಿ ತಗುಲಿ ಹೊತ್ತಿ ಉರಿದಿದೆ.

ಕಟ್ಟಡ ಮತ್ತಿತರ ಸೇರಿ ಅಪಾರ ಹಾನಿ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಘಟನೆಯಲ್ಲಿ ಘನತ್ಯಾಜ್ಯ ಸಂಪೂರ್ಣ ಹೊತ್ತಿ ಉರಿದಿದೆ. ಅಲ್ಲದೇ ಘನತ್ಯಾಜ್ಯ ವಿಲೇವಾರಿ ಮಾಡುವ ನಾಲ್ಕು ಲಕ್ಷ ಮೌಲ್ಯದ ಯಂತ್ರ ಸೇರಿ ಇತರ ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿದೆ.

- Advertisement -

Related news

error: Content is protected !!