- Advertisement -
- Advertisement -




ಬೆಂಗಳೂರು: ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಎಲೆಕ್ಟಿಕ್ ಬೈಕ್ ಶೋರೂಂ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 70 ಬೈಕ್‌ಗಳು ಭಸ್ಮವಾಗಿವೆ.ಶುಕ್ರ ಎಲೆಕ್ಟಿಕ್ ಬೈಕ್ ಶೋರೂಂನಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿ 10 ನಿಮಿಷದಲ್ಲಿ ಕಟ್ಟಡದ ತುಂಬಾ ಬೆಂಕಿ ಅವರಿಸಿದೆ.
ನೋಡನೋಡುತ್ತಿದ್ದಂತೆ ಸುಮಾರು 70 ಬೈಕ್‌ಗಳು ಸುಟ್ಟು ಕರಕಲಾಗಿವೆ. ಬೆಂಕಿ ಕಟ್ಟಡಕ್ಕೆ ಅವರಿಸಿಕೊಳ್ಳುತ್ತಿದ್ದಂತೆ ಶೋರೂಂನಲ್ಲಿದ್ದ ಕೆಲಸಗಾರರು ಕಟ್ಟಡದಿಂದ ಜಿಗಿದು ಬಚಾವ್ ಆಗಿದ್ದಾರೆ. ಘಟನೆಯಲ್ಲಿ ಒಬ್ಬರ ಕಿವಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವ ಸಾದ್ಯತೆ ಇದ್ದು ತನಿಖೆ ನಡೆಯುತ್ತಿದೆ. ಘಟನೆ ಸಂಬಂಧ ರಾಜಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Advertisement -