Wednesday, July 22, 2026
spot_imgspot_img
spot_imgspot_img

ವಿಟ್ಲದಲ್ಲಿ ಬೆಳ್ಳಂಬೆಳಗ್ಗೆ ಬೆಂಕಿ ಅವಘಡ ಸುಟ್ಟು ಭಸ್ಮವಾದ ಎರಡು ಅಂಗಡಿಗಳು.

- Advertisement -
- Advertisement -

ಇಂದು ಮುಂಜಾನೆ ವಿಟ್ಲ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಇರುವ ಕೆ ಜೆ ಟವರ್ಸ್ ನಲ್ಲಿರುವ ಪಿ ಎಂ ಹಾರ್ಡ್ವೇರ್ ಪೇಂಟ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಮೊದಲು ಪೇಂಟ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದನ್ನು ನೋಡಿದ ಸ್ಥಳೀಯರು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಕ್ರಮೇಣ ಬೆಂಕಿ ಪಕ್ಕದ ಬೇಕರಿಯೊಂದಕ್ಕೂ ತಗುಲಿದ್ದೂ ಎರಡು ಅಂಗಡಿಗಳು ಬೆಂಕಿಗಾಹುತಿಯಾಗಿವೆ.

ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬೆಂಕಿ ಒಮ್ಮೆಲೆ ಹೆಚ್ಚಿದ ಪರಿಣಾಮ ಅಂಗಡಿಯ ಬಾಗಿಲನ್ನು ಕೂಡ ತೆರೆಯಲು ಸಾಧ್ಯವಾಗಲಿಲ್ಲ. ನಂತರ ಅಗ್ನಿ ಶಾಮಕ ದಳ ಬಂದು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!