Friday, May 20, 2022
spot_imgspot_img
spot_imgspot_img

ಚಂದ್ರನ ಮಣ್ಣಿನಲ್ಲಿ ಮೊದಲ ಬಾರಿಗೆ ಸಸ್ಯ ಬೆಳೆಸಿದ ವಿಜ್ಞಾನಿಗಳು

- Advertisement -
- Advertisement -

‘ಅಪೊಲೊ ಬಾಹ್ಯಾಕಾಶ ಕಾರ್ಯಕ್ರಮ’ದ ಗಗನಯಾತ್ರಿಗಳು ಚಂದ್ರನಿಂದ ತಂದಿದ್ದ ಮಣ್ಣಿನಲ್ಲಿ ಅಮೆರಿಕದ ವಿಜ್ಞಾನಿಗಳು ಸಸ್ಯಗಳನ್ನು ಬೆಳೆಸುವ ಪ್ರಯೋಗದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಈ ಬೆಳವಣಿಗೆ ಭವಿಷ್ಯದಲ್ಲಿ ಕೈಗೊಳ್ಳಲಾಗುವ ಬಾಹ್ಯಾಕಾಶ ಯೋಜನೆಗಳಿಗೆ ಅಥವಾ ಚಂದ್ರನಲ್ಲಿ ಆಹಾರ ಮತ್ತು ಆಮ್ಲಜನಕ ಉತ್ಪಾದಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಲಾಗುತ್ತಿದೆ. ‘ಚಂದ್ರನ ಮಣ್ಣಿನಲ್ಲಿ ಬೀಜ ಮೊಳಕೆಯೊಡೆದು, ಸಸಿ ಬೆಳೆಯುತ್ತದೆ’ ಎಂಬುದನ್ನು ಫ್ಲಾರಿಡಾ ವಿಶ್ವವಿದ್ಯಾಲಯದ ಸಂಶೋಧಕರು ನಿರೂಪಿಸಿದ್ದಾರೆ. ಈ ಅಧ್ಯಯನ ವರದಿಯು ‘ಕಮ್ಯೂನಿಕೇಷನ್ಸ್‌ ಬಯಾಲಜಿ’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

Hunter's Moon illuminates night sky around the world | Daily Sabah

ಭೂಮಿಯ ಮಣ್ಣಿಗಿಂತ ಭಿನ್ನವಾಗಿರುವ ಚಂದ್ರನ ಮಣ್ಣಿಗೆ ಸಸ್ಯಗಳು ಜೈವಿಕವಾಗಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬ ವಿದ್ಯಮಾನದ ಮೇಲೂ ಈ ಅಧ್ಯಯನ ಬೆಳಕು ಚೆಲ್ಲಿದೆ. ನಾಸಾ ಕೈಗೊಂಡಿದ್ದ ಅಪೊಲೊ 11, 12 ಮತ್ತು 17ನೇ ಬಾಹ್ಯಾಕಾಶ ಕಾರ್ಯಕ್ರಮದ ವೇಳೆ ಚಂದ್ರನಿಂದ ಒಟ್ಟು 12 ಗ್ರಾಮ್‌ನಷ್ಟು ಮಣ್ಣು ತರಲಾಗಿತ್ತು.

- Advertisement -

Related news

error: Content is protected !!