Wednesday, March 29, 2023
spot_imgspot_img
spot_imgspot_img

ಪಿಯುಸಿ ಫಲಿತಾಂಶ; ವಿಟ್ಲದ ಮರ್ಯಮತುಲ್ ಶಮ್ಲಾ ಪಿಸಿಎಂಬಿ ಯಲ್ಲಿ 98% ದಾಖಲೆ

- Advertisement -G L Acharya G L Acharya
- Advertisement -

ವಿಟ್ಲ: ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮರ್ಯಮತುಲ್ ಶಮ್ಲಾ 577 ಅಂಕ ಪಡೆಯುವ ಮೂಲಕ ಇಡೀ ಕಾಲೇಜಿಗೆ ಪ್ರಥಮಳಾಗಿದ್ದಾಳೆ. ಪಿಸಿಎಂಬಿ ಯಲ್ಲಿ 392 ಅಂಕ ಪಡೆದು 98% ಫಲಿತಾಂಶ ದಾಖಲಿಸಿದ್ದಾಳೆ. ಫಿಸಿಕ್ಸ್ ಮತ್ತು ಮ್ಯಾಥಮೆಟಿಕ್ಸ್ ನಲ್ಲಿ ತಲಾ 100ಕ್ಕೆ 100 ಅಂಕ ಪಡೆದಿದ್ದಾಳೆ. ಇಂಗ್ಲಿಷ್ ನಲ್ಲಿ 95, ಹಿಂದಿಯಲ್ಲಿ 90, ಕೆಮಿಸ್ಟ್ರಿಯಲ್ಲಿ 96, ಬಯೋಲಜಿಯಲ್ಲಿ 96 ಅಂಕ ಪಡೆದಿದ್ದಾಳೆ.

ಈಕೆ ವಿಟ್ಲ ಸೆರಂತಿಮಠ ನಿವಾಸಿ ಉಮರ್ ದಾರಿಮಿ ಪಟ್ಟೋರಿ ಹಾಗೂ ನೆಬಿಸತುಲ್ ಮುನೀರಾ ಅವರ ಹಿರಿಯ ಮಗಳು. ಎಸ್ಸೆಸ್ಸೆಲ್ಸಿಯಲ್ಲಿ ಮರ್ಯಮತುಲ್ ಶಮ್ಲಾ 617 ಅಂಕ ದಾಖಲಿಸಿದ್ದಳು. ಮುಂದೆ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾಳೆ.

- Advertisement -

Related news

error: Content is protected !!