Monday, April 29, 2024
spot_imgspot_img
spot_imgspot_img

ವಿಟ್ಲ: ಎಂಜಿಆರ್ ಕಾರ್ಪೋರೇಷನ್ ಪ್ರಸ್ತುತಪಡಿಸುತ್ತಿರುವ ಸ್ಮಾರ್ಟ್ ಇಂಡಿಯಾ 0.1 ಉಳಿತಾಯ ಯೋಜನೆಯ ಪ್ರಥಮ ಡ್ರಾ ಫಲಿತಾಂಶ

- Advertisement -G L Acharya panikkar
- Advertisement -

ಸ್ಮಾರ್ಟ್ ಇಂಡಿಯಾ 0.1 ಉಳಿತಾಯ ಯೋಜನೆಯ ಸದಸ್ಯರಾಗಲು ಇನ್ನು ಕೆಲವೇ ದಿನಗಳ ಅವಕಾಶ

ವಿಟ್ಲ: ಎಂಜಿಆರ್ ಕಾರ್ಪೋರೇಷನ್ ಪ್ರಸ್ತುತಪಡಿಸುತ್ತಿರುವ ಸ್ಮಾರ್ಟ್ ಇಂಡಿಯಾ 0.1 ಉಳಿತಾಯ ಯೋಜನೆಯ ಪ್ರಥಮ ಡ್ರಾ ಫೆಬ್ರವರಿ 9ನೇ ತಾರೀಖಿನಂದು ಸಂಜೆ 7 ಗಂಟೆಗೆ ಜರುಗಿತು.

ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಟ್ಟಡದ ಮುಂಭಾಗ ಸಿದ್ಧವಾಗಿದ್ದ ಸುಂದರ ಮಂಟಪದ ಎದುರು ನೆರೆದಿದ್ದ ಸಾವಿರಾರು ಸದಸ್ಯರ ಸಮ್ಮುಖದಲ್ಲಿ ಡ್ರಾ ವಿಜೇತರನ್ನು ಆಯ್ಕೆ ಮಾಡಲಾಯಿತು. 20 ಮಂದಿ ಸರ್ಪ್ರೈಸ್ ಗಿಫ್ಟಾಗಿ 20 ಚಿನ್ನದ ಉಂಗುರಗಳನ್ನು ಪಡೆದರು. ಸ್ಮಾರ್ಟ್ ಇಂಡಿಯಾ 0.1 ನ ಪ್ರಥಮ ಬಂಪರ್ ಬಹುಮಾನಗಳಾದ 5 ಆಕ್ಟಿವಾ ಹೋಂಡಾಗಳು ರಾಜ್ಯದ ಹಲವು ಕಡೆಗಳ ಐವರು ಅದೃಷ್ಟಶಾಲಿಗಳ ಪಾಲಾಯಿತು.

ಬಂಪರ್ ಬಹುಮಾನ ಆಕ್ಟಿವಾ ಹೋಂಡಾ ಪಡೆದ ಸದಸ್ಯರೆಂದರೆ ಕೊಡಗು ಜಿಲ್ಲೆಯ ಕುಶಾಲನಗರದ ವಿಜಯಕುಮಾರ್ ( 1908), ವಿಟ್ಲ ಪಟ್ಟಣದ ವಿನಾಯಕ ಹೋಟೇಲಿನ ಮಾಲೀಕರಾದ ನಾರಾಯಣ ನಾಯಕ ( 3286), ಕಂಬಳಬೆಟ್ಟುವಿನ ಮಹಮ್ಮದ್ ಅರ್ಫಾಸ್ (3241), ಒಕ್ಕೆತ್ತೂರಿನ ರಹಿಮಾನ್ ( 2928), ಹಾಗೂ ಪ್ರಥಮ ಡ್ರಾದ ಕೊನೆಯ ಆಕ್ಟಿವಾ ಕೇರಳ ಜಿಲ್ಲೆಯ ಬಾಯಾರ್ ನ ಎ.ಕೆ ಸಿದ್ದೀಕ್ ( 2578).

ಸಮಾರಂಭದ ಅಧ್ಯಕ್ಷತೆಯನ್ನು ಎಂಜಿಆರ್ ಕಾರ್ಪೋರೇಷನ್ ನ ಮ್ಯಾನೆಜಿಂಗ್ ಪಾರ್ಟ್ನರ್ ಗಳಲ್ಲಿ ಒಬ್ಬರಾದ ಮಹಮ್ಮದ್ ರಫೀಕ್ ಎಂಯು ವಹಿಸಿ ಡ್ರಾ ನಡೆಸಿಕೊಟ್ಟರು. ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರಾಗಿದ್ದ ಎಂ.ಎಸ್ ಮಹಮ್ಮದ್ ಪ್ರಥಮ ಡ್ರಾ ಸಮಾರಂಭದ ಉದ್ಘಾಟನೆಯನ್ನು ನಡೆಸಿಕೊಟ್ಟು ಉದ್ಘಾಟನಾ ಭಾಷಣ ಮಾಡಿದರು. ವಿಟ್ಲ ಭಾಗದ ಜನತೆ ಈ ಉಳಿತಾಯ ಯೋಜನೆಯ ಸದುಪಯೋಗ ಪಡೆಸುಕೊಳ್ಳಬೇಕು ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ರಮಾನಾಥ ವಿಟ್ಲ, ಸಮಾಜ ಸೇವಕರಾದ ಶಾಕೀರ್ ಅಳಿಕೆಮಜಲ್, ಪತ್ರಕರ್ತರಾದ ಅಬ್ದುಲ್ ಖಾದರ್ ಕುಕ್ಕಜೆ, ಎಂಜಿಆರ್ ಕಾರ್ಪೊರೇಷನ್ ನ ಮ್ಯಾನೇಜಿಂಗ್ ಪಾರ್ಟ್ನರ್ ಗಳಾದ ಅಬ್ಲುಲ್ ಮಜೀದ್, ಮಹಮ್ಮದ್ ಗೌಸ್ ಮತ್ತು ಎಂಜಿಆರ್ ಕಾರ್ಪೋರೇಷನ್ ನ ಇಸ್ಮಾಯಿಲ್ ಕಿಟ್ ಕ್ಯಾಟ್, ಸಿದ್ದೀಕ್ ಕಲ್ಕಂದೂರು ಹಾಜರಿದ್ದರು.

ಸದಸ್ಯರಾಗಲು ಈ ನಂಬರ್‌ನ್ನು 9019728477 ಸಂಪರ್ಕಿಸಬಹುದು.

- Advertisement -

Related news

error: Content is protected !!